ಕರೋನಾಗೆ ಮಹಾತ್ಮ ಗಾಂಧಿ ಮರಿಮೊಮ್ಮಗ ಸತೀಶ್ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಜೋಹಾನ್ಸ್‍ಬರ್ಗ್ (ದಕ್ಷಿಣ ಆಫ್ರಿಕಾ),ನ.23- ಮಹಾತ್ಮ ಗಾಂಧಿಯವರ ಮರಿಮೊಮ್ಮಗ ಸತೀಶ್ (66) ಕೊರೊನಾಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಮೂರು ದಿನಗಳ ಹಿಂದೆ ಸತೀಶ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.

ನ್ಯೂಮೋನಿಯಾದಿಂದ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಸತೀಶ್ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸತೀಶ್ ಅವರ ಸಹೋದರಿ ಉಮಾ ಧುಪೇಲಿಯಾ ಸ್ಪಷ್ಟಪಡಿಸಿದ್ದಾರೆ. ನ್ಯುಮೋನಿಯಾ ಕಾರಣದಿಂದ ಒಂದು ತಿಂಗಳಿಂದ ಅನಾರೋಗ್ಯ ಪೀಡಿತರಾಗಿದ್ದ ನನ್ನ ಸಹೋದರ ಸತೀಶ್ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಸತೀಶ್ ಕೊರೊನಾ ಚಿಕಿತ್ಸೆಗಾಗಿ ಸತತ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದರು. ಮೂರು ವಾರಗಳವರೆಗೂ ಚಿಕಿತ್ಸೆಗೆ ಸ್ಪಂದಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಆರೋಗ್ಯ ಬಿಗಡಾಯಿಸಿತು. ಚಿಕಿತ್ಸೆಗೆ ಅವರು ಸ್ಪಂದಿಸಿಲ್ಲ. ಹಲವು ವರ್ಷಗಳಿಂದ ಶ್ವಾಸಕೋಶಕ್ಕೆ ಸಂಬಂಸಿದ ಕಾಯಿಲೆಗೂ ಸತೀಶ್ ಒಳಗಾಗಿದ್ದರು ಎಂದು ಅವರು ತಿಳಿಸಿದ್ದಾರೆ.

ಸತೀಶ್ ಅವರಿಗೆ ಕೀರ್ತಿ ಮೆನನ್ ಎಂಬ ಇನ್ನೊಬ್ಬ ಸಹೋದರಿಯಿದ್ದು, ಧುಪೆಲಿಯಾ ಜೋಹಾನ್ಸ್‍ಬರ್ಗ್‍ನಲ್ಲೇ ವಾಸಿಸುತ್ತಿದ್ದಾರೆ. ಕೀರ್ತಿ ಅವರು ಗಾಂಯ ಸ್ಮರಣೆಯನ್ನು ಗೌರವಿಸುವ ವಿವಿಧ ಯೋಜನೆಗಳಲ್ಲಿ ಸಕ್ರಿಯರಾಗಿದ್ದಾರೆ.

ತನ್ನ ಜೀವನದ ಬಹುಪಾಲು ಮಾಧ್ಯಮಗಳಲ್ಲಿ, ವಿಶೇಷವಾಗಿ ವಿಡಿಯೋಗ್ರಾಫರ್ ಮತ್ತು ಛಾಯಾಗ್ರಾಹಕನಾಗಿ ಕಳೆದ ಧುಪೆಲಿಯಾ, ಡರ್ಬನ್ ನ ಬಳಿಯ ಫೀನಿಕ್ಸ್ ಸೆಟಲ್‍ಮೆಂಟ್‍ನಲ್ಲಿ ಮಹಾತ್ಮರು ಪ್ರಾರಂಭಿಸಿದ ಕೆಲಸವನ್ನು ಮುಂದುವರಿಸಲು ಗಾಂ ಅಭಿವೃದ್ಧಿ ಟ್ರಸ್ಟ್‍ಗೆ ಸಹಾಯ ಮಾಡುವಲ್ಲಿ ಸಕ್ರಿಯರಾಗಿದ್ದರು.

Facebook Comments