‘ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದ್ರೆ ಕಥೆನೇ ಬೇರೆ ಆಗುತ್ತೆ’ : ಸತೀಶ ಜಾರಕಿಹೊಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ: ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಬಿಜೆಪಿ ಸೇರ್ಪಡೆಯಾದ್ರೆ ಪರಿಸ್ಥಿತಿಯೇ ಬೇರೆ ಅಂತಾ ಸಹೋದರ ಸತೀಶ್​ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಇನ್ನೂ ಕತ್ತಲಲ್ಲಿ ಕುಳಿತು ಕಲ್ಲು ಎಸೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ ಅಂತಾ ಕಾರ್ಯಕರ್ತರಿಗೆ ಹೇಳಿದ್ದಾರೆ.

ಇನ್ನು ರಮೇಶ ಜಾರಕಿಹೊಳಿಯಿಂದ ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಿದೆ. ಅದು ನಿರಂತರವಾಗಿ ಇದ್ದೇ ಇರುತ್ತೆ ಎಂದರು.ಗೋಕಾಕ್ ತಾಲೂಕಿನಲ್ಲಿ ಕಾಂಗ್ರೆಸ್ ಬೆಳೆಸಿದ್ದು ನಾನು. ನಂತರ ರಮೇಶ್ ಜಾರಕಿಹೊಳಿ ಅವರ ಕೈಯಲ್ಲಿ ಕೊಟ್ಟೆ. ಈ  ಚುನಾವಣೆ ಫ್ರೀ ಬಿಟ್ರೆ ಯಾರ ಶಕ್ತಿ ಏನು ಎಂಬುದು ಗೊತ್ತಾಗಲಿದೆ ಅಂತಾ ಸಚಿವ ಸಚಿವ ಸತೀಶ ಜಾರಕಿಹೊಳಿ ತಮ್ಮ ಸಹೋದರ ರಮೇಶ್ ಜಾರಕಿಹೊಳಿಗೆ ಪರೋಕ್ಷವಾಗಿ ಸವಾಲ್​  ಹಾಕಿದ್ದಾರೆ.

ಗೋಕಾಕ್ ಶಾಸಕರು ನಮ್ಮ ಪಕ್ಷದ ಜತೆಗೆ ಇಲ್ಲ‌.  ಹೀಗಾಗಿ ನಾನು ಅನಿವಾರ್ಯವಾಗಿ ಗೋಕಾಕ್​ನಲ್ಲಿ ಪ್ರಚಾರ ನಡೆಸಬೇಕಾಗಿದೆ. ಈಗಾಗಲೇ ಮಾಜಿ ಸಚಿವ ರಮೇಶ ಜಾರಕಿಹೊಳಿ ಪಕ್ಷದಿಂದ ಹೊರಗೆ ಹೋಗಿದ್ದಾರೆ.

ರಮೇಶ ಜಾರಕಿಹೊಳಿ ನಿನ್ನೆ ಗೋಕಾಕ್ ನಗರದಲ್ಲಿ ಸಭೆ ಮಾಡಿ ಬಿಜೆಪಿ ಬೆಂಬಲಿಸುವಂತೆ ಸೂಚನೆ‌ ಕೊಟ್ಟಿದ್ದಾರೆ. ಹೀಗಾಗಿ ಮಾಜಿ ಸಚಿವ‌ ರಮೇಶ್​ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್​​ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ದೂರು ನೀಡಿದ್ದಾರೆ.

ಜೊತೆಗೆ ಜಿಲ್ಲೆಯಲ್ಲಿ ಬೇರೆ ಬೇರೆ ಸ್ಥಳದಲ್ಲಿ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡ್ರು ಅಷ್ಟೇ ಬಿಟ್ರೂ ಅಷ್ಟೆ. 20 ವರ್ಷದಿಂದ ಗೋಕಾಕ್ ರಮೇಶ್ ಜಾರಕಿಹೊಳಿ ಹಿಡಿತದಲ್ಲಿ ಇತ್ತು. ಈ ಚುನಾವಣೆ ಸ್ವಲ್ಪ ಗೊಂದಲ ಆಗೋದು ಸಹಜ. ಪಕ್ಷದ ಪರ ಇರೋ ಕಾರ್ಯಕರ್ತರು ಗೋಕಾಕ್ ನಲ್ಲಿ ಇದ್ದಾರೆ.

ಲೋಕಸಭೆ ಚುನಾವಣೆ ನಮಗೆ ಸೆಮಿಫೈನಲ್. ಮುಂದೆ ಫೈನಲ್ ಪಂದ್ಯವಾಳಿ ಇದೆ. 6 ತಿಂಗಳು ಅವಕಾಶ ಇದ್ದು ಸಿದ್ಧತೆ ಮಾಡಿಕೊಳ್ಳುತ್ತೇವೆ. ಫೈನಲ್ ಮ್ಯಾಚ್ ಬಗ್ಗೆ ಹೆಚ್ಚು ಇಂಟ್ರಸ್ಟ್ ಇದೆ ನಮಗೆ. ಕಾರ್ಯಕರ್ತರು ನಮ್ಮ ಜತೆಗಾ ಅಥವಾ ಅವರೊಟ್ಟಿಗೇ ಗುರುತಿಸಿಕೊಳ್ಳಬೇಕು ಅಂತಾ ಇದೆ ವೇಳೆ ಸತೀಶ ಜಾರಕಿಹೊಳಿ ಹೇಳಿದ್ರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin