ಸಚಿವಾಕಾಂಕ್ಷಿಗಳ ಆಸೆ ಈಡೇರಲಿ: ಸತೀಶ್ ಜಾರಕಿಹೊಳಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜ.19-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿದೇಶದಿಂದ ಬಂದ ನಂತರವಾದರೂ ಸಚಿವರಾಗಬೇಕೆಂದುಕೊಂಡಿರುವವರ ಆಸೆ ಈಡೇರಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಪರಿಸ್ಥಿತಿ ಬರುತ್ತದೆ ಎಂದು ನಾನು ಮೊದಲು ಹೇಳಿದ್ದೆ.

ರಮೇಶ್ ಜಾರಕಿ ಹೊಳಿ ಸೇರಿದಂತೆ ಸಚಿವ ಸ್ಥಾನದ ಆಕಾಂಕ್ಷಿಗಳ ಆಸೆ ಬೇಗ ಈಡೇರಿಸಲಿ ಎಂದು ಹಾರೈಸುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು. ಕೆಲವರು ಒಂದು ವರ್ಷದಿಂದ ಸಚಿವರಾಗಲು ಕಾಯುತ್ತಿದ್ದಾರೆ. ಇನ್ನು ಕೆಲವರು ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅದನ್ನು ಬೀಳಿಸಿ ಸಚಿವರಾಗಬೇಕೆಂದು ಕಾದಿದ್ದಾರೆ. ಅವರ ಆಸೆಯನ್ನು ಸಿಎಂ ಈಡೇರಿಸಲಿ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಕೇಳಿದ ಪ್ರಶ್ನೆಗೆ ನಾಲ್ಕು ಕಾರ್ಯಾಧ್ಯಕ್ಷ ಸ್ಥಾನದ ಸೃಷ್ಟಿ ಬಗ್ಗೆ ಚಿಂತನೆ ನಡೆದಿದೆ. ಜಾತಿ ಮತ್ತು ಪ್ರದೇಶವಾರು ಸಮತೋಲನ ಮಾಡಲು ನಾಲ್ಕು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸುವ ಪ್ರಯತ್ನ ನಡೆದಿದೆ. ಒಂದು ವಾರದಲ್ಲಿ ಎಲ್ಲ ಸರಿಹೋಗಲಿದೆ ಎಂದು ಸತೀಶ್ ಜಾರಕಿ ಹೊಳಿ ಎಂದರು. ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆಯೇ ಹೊರತು ಕಾಂಗ್ರೆಸ್‍ನಲ್ಲಿ ಮೂಲ, ವಲಸಿಗ ಎಂಬ ಗೊಂದಲ ಇಲ್ಲ ಎಂದು ಅವರು ಹೇಳಿದರು.

ವಿಪಕ್ಷ ನಾಯಕ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಒಬ್ಬರಿಗೇ ಇರಲಿ ಎಂಬುದು ನನ್ನ ಅಭಿಮತವಾಗಿದೆ ಎಂದು ಮತ್ತೊಂದು ಪ್ರಶ್ನೆಗೆ ಸತೀಶ್ ಜಾರಕಿ ಹೊಳಿ ಉತ್ತರಿಸಿದರು.

Facebook Comments