ಸ್ಮಶಾನದಲ್ಲಿ ಕಾರು ಚಾಲನೆ ಮಾಡುವುದು ಮೂಢನಂಬಿಕೆಯಲ್ಲವೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.13- ಮೂಢನಂಬಿಕೆ ವಿರುದ್ಧ ಇದ್ದೇನೆ ಎಂದು ಹೇಳಿ ಸ್ಮಶಾನದಲ್ಲಿ ಕಾರು ಚಾಲನೆ ಮಾಡುವುದು ಕೂಡ ಮೂಢನಂಬಿಕೆಯೇ ಆಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಹೊಸ ವಾಹನ ಖರೀದಿ ಮಾಡಿದ ವೇಳೆ ದೇವಸ್ಥಾನ ಅಥವಾ ಪುಣ್ಯ ಕ್ಷೇತ್ರಗಳಲ್ಲಿ ಪೂಜೆ ಮಾಡಿಸಿ ಚಾಲನೆ ಆರಂಭಿಸುವುದು ವಾಡಿಕೆ. ಆದರೆ ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ತಮ್ಮ ಹೊಸ ಕಾರಿನ ಚಾಲನೆಯನ್ನು ಸ್ಮಶಾನದಿಂದ ಆರಂಭಿಸಿದ್ದಾರೆ.

ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೊದಲಿನಿಂದಲೂ ಮೂಢನಂಬಿಕೆ ಆಚರಣೆಗಳನ್ನು ವಿರೋಧಿಸುತ್ತಾ ಬಂದಿರುವ ಸತೀಶ್ ಜಾರಕಿಹೊಳಿ ಅಮವಾಸ್ಯೆ ದಿನ ಸ್ಮಶಾಸನದಲ್ಲಿ ಬೋಜನಕೂಟ ಏರ್ಪಡಿಸುವುದು, ಉಪನ್ಯಾಸಗಳನ್ನು ಆಯೋಜಿಸುವುದನ್ನು ಮಾಡುತ್ತಾ ಬಂದಿದ್ದಾರೆ.

ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಸಂದರ್ಭದಲ್ಲಿ ಅಪಾಯ ಎಂದು ಮನೆಯಲ್ಲಿದ್ದಾಗ ಸತೀಶ್ ಜಾರಕಿಹೊಳಿ ಅದರ ವಿರುದ್ಧ ಕಾರ್ಯಕ್ರಮಗಳನ್ನು ಆಯೋಜಿಸಿ ಹೊಸ ಸಂಪ್ರದಾಯ ಹುಟ್ಟು ಹಾಕಿದ್ದರು.

ತಮ್ಮ ಕಾರಿನ ಚಾಲನೆಯನ್ನು ಸ್ಮಶಾನದಿಂದ ಆರಂಭಿಸಿರುವ ಸತೀಶ್ ಜಾರಕಿಹೊಳಿ ಅವರನ್ನು ಸುರೇಶ್ ಕುಮಾರ ಛೇಡಿಸಿದ್ದಾರೆ ತಾನು ಮೂಢನಂಬಿಕೆ ವಿರುದ್ಧ ಇದ್ದೇನೆ ಎಂದು ರುಜುವಾತು ಮಾಡಲು ಮಾಜಿ ಸಚಿವ ಸತೀಶ್ ಜಾರಕಿಹೊಳಿಯವರು ತನ್ನ ಹೊಸ ಕಾರಿಗೆ ಸ್ಮಶಾನದಲ್ಲೇ ಚಾಲನೆ ಕೊಡುತ್ತಿರುವುದು ಮೂಢನಂಬಿಕೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

Facebook Comments

Sri Raghav

Admin