“ಕೈ ಚೀಲ ಹಿಡಿಯುವುದು ಎಂದರೆ, ಚಮಚಗಿರಿಯಲ್ಲ” : ಅಣ್ಣನಿಗೆ ಸತೀಶ್ ಜಾರಕಿಹೊಳಿ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.17-ರಾಜಕೀಯದಲ್ಲಿ ಗಾಡ್‍ಫಾದರ್‍ಗಳು ಬೇಕೇ ಬೇಕು. ಕೈ ಚೀಲ ಹಿಡಿಯುವುದು ಚಮಚಗಿರಿಯಲ್ಲ ಎಂದು ರಮೇಶ್ ಜಾರಕಿ ಹೊಳಿ ಅವರಿಗೆ ಸತೀಶ್ ಟಾಂಗ್ ನೀಡಿದ್ದಾರೆ.

ಗೋಕಾಕ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಮನೆ ಬಾಗಿಲು ಕಾಯಬೇಕು. ಕೈ ಚೀಲ ಹಿಡಿಯಬೇಕಾದ ಪರಿಸ್ಥಿತಿ ಇದೆ ಎಂದು ರಮೇಶ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಎಲ್ಲಾ ಪಕ್ಷದಲ್ಲೂ ಈ ಪರಿಸ್ಥಿತಿ ಇದೆ. ಕೈ ಚೀಲ ಹಿಡಿಯುವುದು ಎಂದರೆ, ಚಮಚಗಿರಿಯಲ್ಲ.

ರಮೇಶ್ ಅವರು 25 ವರ್ಷಗಳಿಂದ ಬಿ.ಶಂಕರಾನಂದ ಅವರ ಕೈಚೀಲ ಹಿಡಿದಿದ್ದಾರೆ. ಕೆ.ಎಚ್.ಪಟೇಲ್ ಅವರು ನನ್ನ ಗುರುಗಳು ಎಂದಿದ್ದರು. ನಂತರ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ನನ್ನ ಗುರುಗಳು ಎಂದರು, ಈಗ ವಿಶ್ವನಾಥ್‍ನನ್ನು ಗುರುಗಳು ಎನ್ನುತ್ತಿದ್ದಾರೆ.

ಅದೆಷ್ಟೋ ಗುರುಗಳಿದ್ದಾರೋ ಗೊತ್ತಿಲ್ಲ. ಮೊದಲು ಲಕ್ಷ್ಮಿ ಹೆಬ್ಬಾಳ್ಕರ್, ಡಿ.ಕೆ.ಶಿವಕುಮಾರ್ ಅವರ ಗ್ರೂಪ್‍ನಲ್ಲಿ ರಮೇಶ್ ಇದ್ದರು. ನಂತರ ಸರಿ ಬರದೆ ಹೊರಬಂದರು. ಅವರಿಗೆ ಹೇಗೆ ಬೇಕೋ ಹಾಗೆ ಬದಲಾಗುತ್ತಾರೆ ಎಂದು ಟೀಕಿಸಿದರು.

ನನಗೂ ಡಿ.ಕೆ.ಶಿವಕುಮಾರ್, ಲಕ್ಷ್ಮಿಹೆಬ್ಬಾಳಕರ್ ಅವರಿಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಮೇಶ್ ಲಖನ್‍ಗೆ ಬೆನ್ನಿಗೆ ಚೂರಿ ಹಾಕಿದ್ದಾನೆ. ಮುಂದಿನ ದಿನಗಳಲ್ಲಿ ಇದು ಗೊತ್ತಾಗುತ್ತದೆ. ರಮೇಶ್ ಅವರ ರಾಜಕೀಯ ಆಟ ಈ ಚುನಾವಣೆ ಯಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.

ನಾನು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮನೆಗೆ ಚಹಾ ಕುಡಿಯಲು ಹೋಗಿದ್ದು ನಿಜ. ಆದರೆ ಈಗಲ್ಲ. ಇನ್ನು ಮುಂದೆ ಹೋಗುತ್ತೇನೆ
ಹೇಳಿದರು. ಹುಚ್ಚನನ್ನು ಮಂತ್ರಿ ಮಾಡಿದ್ದೀರಿ. ರಮೇಶ್ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ವಿರೋಧಿಸಿದ್ದು ನಿಜ. ಮೊದಲಿನಿಂದಲೂ ನಾನು ರಮೇಶ್‍ನನ್ನು ವಿರೋಧಿಸುತ್ತಲೇ ಬಂದಿದ್ದೇನೆ.

ಹೆಬ್ಬಾಳ್ಕರ್ ಅವರಿಂದಲೇ ಮಂತ್ರಿಯಾಗಿದ್ದು. ಇಲ್ಲ ಎಂದು ಹೇಳಲಿ. ನೋಡೋಣ ಎಂದು ತಿಳಿಸಿದರು. ಬಿಜೆಪಿ ಸೇರಿರುವ ರಮೇಶ್ ಅವರು ಈಗ ಯಡಿಯೂರಪ್ಪ ಅವರನ್ನು ಯಾವ ಗುಂಡಿಗೆ ಹಾಕುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

Facebook Comments

Sri Raghav

Admin