ಚೀನಾ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿ ಮಿಶ್ರ ಡಬಲ್ಸ್‌‌ನಲ್ಲಿ ಸತ್ವಿಕ್-ಅಶ್ವಿನಿ ಶುಭಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಚಾಂಗ್‍ಚೊವು(ಚೀನಾ), ಸೆ.17- ಚೀನಾದಲ್ಲಿ ನಡೆಯುತ್ತಿರುವ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿಯ ಆರಂಭಿಕ ಸುತ್ತಿನಲ್ಲಿ ಭಾರತದ ಸತ್ವಿಕ್‍ರಾಂಕಿ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಮಿಶ್ರಡಬಲ್ಸ್‌‌ನಲ್ಲಿ ಜಯ ಸಾಧಿಸಿ ಶುಭಾರಂಭ ಮಾಡಿದೆ.

ಪಂದ್ಯಾವಳಿಯ ಪ್ರಥಮ ಪಂದ್ಯದಲ್ಲಿ ಈ ಜೋಡಿ ಇಂಡೊನೇಷಿಯಾದ ಪ್ರಬಲ ಆಟಗಾರರಾದ ಪ್ರವೀಣ್ ಜೋರ್ಡಾನ್ ಮತ್ತು ಮೆಲಾಟಿಡಾಯಿವಾ ಬಕ್ಟಾಮಿಯಾಂಟಿ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸುವಲ್ಲಿ ಸಫಲರಾದರು. 50ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ವಿಶ್ವದ ಏಳನೇ ಕ್ರಮಾಂಕದ ಇಂಡೊನೇಷಿಯಾ ಜೋಡಿಯನ್ನು ಭಾರತದ 26ನೇ ರ್ಯಾಂಕ್‍ನ ಸತ್ವಿಕ್-ಅಶ್ವಿನಿ 22-20, 17-21, 21-17 ಸೆಟ್‍ಗಳಿಂದ ಮಣಿಸಿದರು.

ಈ ಗೆಲುವಿನೊಂದಿಗೆ ಶುಭಾರಂಭ ಮಾಡಿರುವ ಈ ಜೋಡಿ ಎರಡನೇ ಸುತ್ತಿನಲ್ಲಿ ಜಪಾನಿನ ಪ್ರಬಲ ಮಿಶ್ರ ಡಬಲ್ಸ್ ತಂಡವನ್ನು ಎದುರಿಸಲಿದೆ.

Facebook Comments