ಮೈಕ್ರೋಸಾಫ್ಟ್ ಸಂಸ್ಥೆಯ ಸತ್ಯ ನಾದೆಲ್ಲಾಗೆ ಪ್ರಹ್ಲಾದ್ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಅ.13-ಜಾಗತೀಕ ಉದ್ಯಮಿಗಳಾಗಿ ಗುರುತಿಸಿಕೊಂಡಿರುವ ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯ ನಾದೆಲ್ಲಾ ಅವರು ಪ್ರತಿಷ್ಠಿತ ಸಿ.ಕೆ.ಪ್ರಹ್ಲಾದ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

2010ರಲ್ಲಿ ಭಾರತೀಯ ಮೂಲದ ಪ್ರಹ್ಲಾದ್ ಅವರು ಕಾಪೆರ್ರೇಟ್ ಇಕೋ ಫೋರಂನಡಿ ಜಾಗತೀಕ ವ್ಯಾಪಾರ ಸುಸ್ಥಿರತೆ ನಾಯಕತ್ವ ಹೊಂದಿರುವ ಜಾಗತೀಕ ನಾಯಕರಿಗೆ ಈ ಪ್ರಶಸ್ತಿ ನೀಡುತ್ತ ಬರುತ್ತಿದ್ದಾರೆ.

ಮೈಕ್ರೋಸಾಫ್ಟ್ ಸಂಸ್ಥೆಯ ನಾದೆಲ್ಲಾ ಸೇರಿದಂತೆ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಮುಖ್ಯ ಹಣಕಾಸು ಅಧಿಕಾರಿ ಹಾಗೂ ಮುಖ್ಯ ಪರಿಸರ ಅಧಿಕಾರಿಗಳು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

2030 ರ ವೇಳೆಗೆ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಕಾರ್ಬನ್ ನೆಗಿಟಿವ್ ಕಂಪನಿಯಾಗಿ ಪರಿವರ್ತಿಸುವ ಗುರಿ ಹೊಂದಿರುವುದರಿಂದ ಆ ಸಂಸ್ಥೆಯ ಮುಖ್ಯಸ್ಥರುಗಳಿಗೆ ಪ್ರಹ್ಲಾದ್ ಪ್ರಶಸ್ತಿ ನೀಡಲಾಗುತ್ತಿದೆ.

Facebook Comments