ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂಗೀತ ವಿದ್ವಾಂಸ ಡಾ.ರಾ.ಸತ್ಯನಾರಾಯಣ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜ.17-ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಸಂಗೀತ ವಿದ್ವಾಂಸ ಡಾ.ರಾ.ಸತ್ಯನಾರಾಯಣ ಅವರು ನಿನ್ನೆ ಮಧ್ಯರಾತ್ರಿ ನಿಧನರಾಗಿದ್ದಾರೆ.  ಜಯನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಸತ್ಯನಾರಾಯಣ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 93 ವರ್ಷಗಳಾಗಿತ್ತು.

ಜಯಚಾಮರಾಜ ಒಡೆಯರ್ ಅವರ ಆಸ್ಥಾನದಲ್ಲಿ ಸಂಗೀತ ವಿದ್ವಾಂಸರಾಗಿದ್ದ ರಾಮಯ್ಯನವರ ಪುತ್ರರಾಗಿರುವ ಸತ್ಯನಾರಾಯಣ ಅವರಿಗೆ ಸಂಗೀತ-ನಾಟಕ ಅಕಾಡೆಮಿ ರತ್ನ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಅಂತಿಮ ದಿನಗಳವರೆಗೆ ಸಂಗೀತ ಸುಧಾಕರ ಎಂಬ ಪುಸ್ತಕ ರಚನೆಯಲ್ಲಿ ಅವರು ತೊಡಗಿಕೊಂಡಿದ್ದರು. ಈ ಪುಸ್ತಕವನ್ನು ಮುಂದುವರೆಸಿಕೊಂಡು ಹೋಗುವಂತೆ ನನಗೆ ತಂದೆ ತಿಳಿಸಿದ್ದಾರೆ ಎಂದು ಅವರು ಪುತ್ರ ನಂದಕುಮಾರ್ ತಿಳಿಸಿದ್ದಾರೆ.

ರಾ.ಸತ್ಯನಾರಾಯಣ ಅವರ ನಿಧನಕ್ಕೆ ಸಂಗೀತಾಭಿಮಾನಿಗಳು, ವಿದ್ಯಾರ್ಥಿಗಳು, ಸಂಗೀತ ವಿದ್ವಾನರು, ವಿವಿಧ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರು ಪುತ್ರ ನಂದಕುಮಾರ್ ಹಾಗೂ ಪುತ್ರಿ ರೋಹಿಣಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

Facebook Comments