ಪಾಕ್ ಬರ್ಬಾದ್..! ಅಮೆರಿಕ ಪ್ರವಾಸಕ್ಕೆ ಇಮ್ರಾನ್‍ಗೆ ಸೌದಿ ದೊರೆ ವಿಮಾನ ದಾನ..!

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್, ಸೆ.23-ಪಾಕಿಸ್ತಾನದ ಆರ್ಥಿಕತೆ ದಿನೆ ದಿನೇ ತೀವ್ರ ಹದಗೆಟ್ಟಿದ್ದು, ಹಣಕಾಸು ನೆರವಿಗಾಗಿ ಇತರರನ್ನು ಆಶ್ರಯಿಸುವ ಮುಗ್ಗಟ್ಟು ಎದುರಾಗಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್‍ಖಾನ್ ಅಮೆರಿಕ ಪ್ರವಾಸಕ್ಕೆ ಸೌದಿ ಅರೇಬಿಯಾ ರಾಜ ನೆರವಾಗಿರುವುದು ಅಲ್ಲಿನ ವಾಸ್ತವ ಸ್ಥಿತಿಗೆ ಸಾಕ್ಷಿಯಾಗಿದೆ.

ಇಮ್ರಾನ್ ಖಾನ್ ಅಮೆರಿಕ ಪ್ರವಾಸಕ್ಕೆ ಹಣದ ಕೊರತೆಯಿಂದ ವಿಶೇಷ ವಿಮಾನ ಬಳಕೆ ಮಾಡುತ್ತಿಲ್ಲ ಎಂಬುದನ್ನು ಅರಿತ ಸೌದಿ ದೊರೆ ಪಾಕ್ ಪ್ರಧಾನಿ ಅವರನ್ನು ತಮ್ಮ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ಕಳಿಸಿಕೊಟ್ಟಿದ್ದಾರೆ. ನೀವು ನಮ್ಮ ಅತಿಥಿ ಎಂದು ಹೇಳಿರುವ ಸೌದಿ ಅರೇಬಿಯಾ ದೊರೆ ಪಾಕ್ ಪ್ರಧಾನಿಯ ಅಮೆರಿಕ ಪ್ರವಾಸಕ್ಕೆ ತಮ್ಮ ವಿಶೇಷ ವಿಮಾನ ನೀಡಿ ಅದರ ಖರ್ಚು ವೆಚ್ಚಗಳನ್ನೆಲ್ಲಾ ತಾವೇ ಭರಿಸಿದ್ದಾರೆ.

ಕಾಶ್ಮೀರ ವಿಷಯವಾಗಿ ಇಸ್ಲಾಮಿಕ್ ರಾಷ್ಟ್ರಗಳ ಬೆಂಬಲ ಪಡೆಯುವ ನಿಟ್ಟಿನಲ್ಲಿ ಇಮ್ರಾನ್ ಖಾನ್ ಅಮೆರಿಕಕ್ಕೆ ತೆರಳುವ ಮುನ್ನ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು.

Facebook Comments

Sri Raghav

Admin