ಸೌದಿಯಲ್ಲಿ ಡ್ರೋಣ್ ಅಟ್ಯಾಕ್ ಎಫೆಕ್ಟ್‌ನಿಂದ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.22-ಸೌದಿ ಅರೇಬಿಯಾದ ಘಟಕದ ಮೇಲೆ ಇರಾನ್ ಬಂಡುಕೋರರು ಡ್ರೋಣ್ ದಾಳಿ ನಡೆಸಿದ ನಂತರ ನಿರೀಕ್ಷೆಯಂತೆ ಭಾರತದ ಮೇಲೂ ಅದರ ದುಷ್ಪರಿಣಾಮಗಳು ಎದುರಾಗಿದ್ದು, ಇಂಧನಗಳ ಬೆಲೆ ಏರಿಕೆ ಮುಂದುವರೆದಿದೆ.

ಪ್ರತಿಲೀಟರ್‍ಗೆ ಪೆಟ್ರೋಲ್ ದರ 1.59ರೂ.ಗಳು ಹಾಗೂ ಡೀಸೆಲ್ ಬೆಲೆ 1.31ರೂ.ಗಳ ಏರಿಕೆಯ ಸ್ಥಿತಿಯಲ್ಲಿಯೇ ಮುಂದುವರೆದಿದೆ. ಸತತ ಆರು ದಿನಗಳಿಂದಲೂ ಹೆಚ್ಚಳ ಪ್ರಮಾಣದಲ್ಲಿದೆ.
ದೆಹಲಿಯಲ್ಲಿಂದು ಬೆಳಗ್ಗೆ ಪೆಟ್ರೋಲ್ ದರ 27ಪೈಸೆಗಳಷ್ಟು ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಪ್ರತಿಲೀಟರ್‍ಗೆ 73.62ರೂ.ನಿಗದಿಯಾಗಿದೆ.

ಅದೇ ರೀತಿ ಡೀಸೆಲ್ ದರ 18ಪೈಸೆಯಷ್ಟು ಏರಿಕೆಯಾಗಿದ್ದು, ರಾಜಧಾನಿಯಲ್ಲಿ ಇಂದಿನ ದರ 66.74ರೂ.ಗಳು. ರಾಷ್ಟ್ರೀಯ ದರಗಳಲ್ಲಿ ಮತ್ತಷ್ಟು ಏರಿಕೆ ಕಂಡು ಬರುವ ಸಾಧ್ಯತೆಯಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಘಟಕಗಳ ಇಂದಿನ ದರ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸೌದಿ ಅರೇಬಿಯಾ ಘಟಕಗಳ ಮೇಲೆ ಬಂಡುಕೋರರ ಡ್ರೋಣ್ ದಾಳಿ ನಂತರ ಅಲ್ಲಿನ ತೈಲ ಉತ್ಪಾದನೆಯಲ್ಲಿ ಅರ್ಧದಷ್ಟು ಕುಸಿತ ಕಂಡು ಬಂದಿದೆ. ಉದ್ಯಮದ ಮಂದಿ ಮುಷ್ಕರದ ಹಾದಿ ಹಿಡಿದಿರುವುದರಿಂದ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ದರ ಏರಿಕೆ ಅನಿವಾರ್ಯವಾಗಿದೆ.

Facebook Comments