ಡ್ರೋಣ್ ದಾಳಿ ನಂತರ ಸೌದಿಯಲ್ಲಿ ಅರ್ಧಕ್ಕಿಂತ ಹೆಚ್ಚು ತೈಲ ಉತ್ಪಾದನೆ ಕುಸಿತ..!

ಈ ಸುದ್ದಿಯನ್ನು ಶೇರ್ ಮಾಡಿ

ರಿಯಾದ್, ಸೆ.15- ಯೆಮನ್ ಬಂಡುಕೋರರಿಂದ ದಾಳಿಗೊಳಗಾದ ಸೌದಿ ಅರೇಬಿಯಾದಲ್ಲಿ ಅದರ ದುಷ್ಪರಿಣಾಮದ ಬಿಸಿ ತಟ್ಟ ತೊಡಗಿದೆ.  ತೈಲ ಉತ್ಪಾದನೆ ಘಟ ಕಗಳಲ್ಲಿ ತೈಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ದೇಶಾದ್ಯಂತ ತೈಲ ಉತ್ಪಾದನೆ ಮತ್ತು ಪೂರೈಕೆಗೆ ಭಾರೀ ಅಡಚಣೆಯಗಿದೆ. ಕಂಪೆನಿಯ ಒಟ್ಟು ಉತ್ಪಾದನೆ, ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಇಂಧನ ಸಚಿವರು ತಿಳಿಸಿದ್ದಾರೆ.

ಅಬ್ಕೈಕ್ ಮತ್ತು ಖುರೈಸ್ ಘಟಕಗಳಲ್ಲಿನ ತೈಲ ಉತ್ಪನ್ನದ ಮೇಲೆ ತೀವ್ರ ಪರಿಣಾಮ ಉಂಟಾಗಿದೆ ಎಂದು ಸೌದಿ ಅರೇಬಿಯಾ ಇಂಧನ ಖಾತೆ ಸಚಿವ ಪ್ರಿನ್ಸ್ ಅಬ್ದುಲಾಜಿಜ್ ಬಿನ್ ಸಲ್ಮಾನ್ ತಿಳಿಸಿದ್ದಾರೆ. ಒಟ್ಟು ಉತ್ಪಾದನೆಯ ಶೇಕಡಾ 50ರಷ್ಟು ಕಡಿಮೆಯಾಗಿದೆ. ಕಚ್ಚಾ ತೈಲ ಪ್ರತಿದಿನ 5.7 ದಶಲಕ್ಷ ಬ್ಯಾರಲ್‍ಗಳಷ್ಟು ಕಡಿಮೆಯಾಗಿದೆ.

ಪೂರ್ವ ಸೌದಿ ಅರೇಬಿಯಾದ ಎರಡು ಪ್ರಮುಖ ಅರಮ್ಕೊ ಕೇಂದ್ರಗಳಾದ ಅಬ್ಕೈಕ್ ಮತ್ತು ಖುರೈಸ್ ಘಟಕಗಳ ಮೇಲೆ ಹುತಿ ಬಂಡುಕೋರರು ದಾಳಿ ನಡೆಸಿದೆ. ದಾಳಿಯಲ್ಲಿ ಯಾರಿಗೂ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ. ಇರಾನ್ ಜೊತೆಗೆ ಸಂಪರ್ಕ ಹೊಂದಿರುವ ಹುತಿ ಬಂಡುಕೋರರು 10 ಡ್ರೋಣ್ ಮೂಲಕ ಬಹುದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.

ಅಮೆರಿಕಾ ಗೃಹ ಸಚಿವ ಮೈಕ್ ಪೊಂಪಿಯೊ, ದಾಳಿಗೆ ಇರಾನ್ ಕಾರಣ ಎಂದು ಆರೋಪಿಸಿದ್ದಾರೆ. ವಿಶ್ವದ ಇಂಧನ ಪೂರೈಕೆ ಘಟಕಗಳ ಮೇಲೆ ಇರಾನ್ ದಾಳಿ ಆರಂಭಿಸಿದ್ದು ಉಭಯ ದೇಶಗಳ ನಡುವಣ ಸಂಬಂಧ ಮತ್ತಷ್ಟು ಹಳಸಿದೆ.  ಅಮೆರಿಕಾ ಮೇಲೆ ಸದಾ ಕೆಂಡಕಾರುತ್ತಿರುವ ಇರಾನ್ ಉಗ್ರರ ದಾಳಿಯನ್ನು ಅಮೆರಿಕಾ ಅಧ್ಯಕ್ಷ ಟ್ರಂಪ್ ಖಂಡಿಸಿದ್ದಾರೆ.

Facebook Comments