ಬಡ್ತಿಯಲ್ಲಿ ಮೀಸಲಾತಿಗೆ ಅಳತೆಗೋಲಿಲ್ಲ : ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.28- ಸರ್ಕಾರಿ ಉದ್ಯೋಗದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿ, ಸಿಬ್ಬಂದಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲು ಅಳತೆಗೋಲನ್ನು ನಿಗದಿಪಡಿಸಲಾಗದು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿರುವ ಸುಪ್ರೀಂಕೋರ್ಟ್, ದತ್ತಾಂಶಗಳ ಸಂಗ್ರಹದ ಹೊಣೆಗಾರಿಕೆ ರಾಜ್ಯ ಸರ್ಕಾರಗಳಿಗೆ ಸೇರಿದ್ದು ಎಂದು ತೀರ್ಪು ನೀಡಿದೆ.

ಸರ್ಕಾರಿ ಹುದ್ದೆಗಳಲ್ಲಿ ಬಡ್ತಿ ಮೀಸಲಾತಿ ಸಂಬಂಧ ಇಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದಲ್ಲಿ ಅಸಮರ್ಪಕತೆಯನ್ನು ಕುರಿತ ಅಂಕಿ-ಅಂಶಗಳನ್ನು ಕಲೆ ಹಾಕುವುದು ರಾಜ್ಯ ಸರ್ಕಾರಗಳ ಬಾಧ್ಯತೆ ಎಂದಿದೆ.

ನ್ಯಾಯಮೂರ್ತಿ ನಾಗೇಶ್ವರರಾವ್ ಅವರ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿ, 2021ರ ಅಕ್ಟೋಬರ್ 26ರಂದು ತನ್ನ ತೀರ್ಪನ್ನು ಕಾದಿರಿಸಿತ್ತು.  ನ್ಯಾಯಾಲಯದ ಮುಂದೆ ವಾದ ಮಂಡಿಸಿದ ಕೇಂದ್ರ ಸರ್ಕಾರ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳು ಮುಂದುವರಿದ ವರ್ಗಗಳಿಗೆ ಸರಿ ಸಮಾನವಾದ ಜೇಷ್ಠತೆ ಪಡೆಯಲು ಮತ್ತು ಅಧಿಕಾರ ಸ್ಥಾನ ಮಾನ ಪಡೆಯಲು ಸಾಧ್ಯವಾಗಿಲ್ಲ ಎಂಬುದು ವಾಸ್ತವಿಕ ಸಂಗತಿ ಎಂದು ತನ್ನ ಅಭಿಪ್ರಾಯ ತಿಳಿಸಿತ್ತು.

2006ರಲ್ಲಿ ಎಂ.ನಾಗರಾಜ್ ಪ್ರಕರಣ ಮತ್ತು 2018ರಲ್ಲಿ ಜರ್ನೈಲ್ ಸಿಂಗ್ ಅವರ ಪ್ರಕರಣಗಳ ತೀರ್ಪಿನ ಪ್ರಕಾರ ಪ್ರಮಾಣಿಕರಿಸಬಹುದಾದ ದತ್ತಾಂಶಗಳನ್ನು ಸಂಗ್ರಹಿಸಲು ರಾಜ್ಯ ಸರ್ಕಾರಗಳು ಬದ್ಧವಾಗಿವೆ. ಪ್ರತಿಯೊಂದು ವರ್ಗದ ಹುದ್ದೆಗೂ ಅಧಿಕಾರಿಯ ಸಂಪೂರ್ಣ ಸೇವಾವಯ ದತ್ತಾಂಶವನ್ನು ಸಂಗ್ರಹಿಸಬೇಕು ಎಂದು ಬಿ.ಆರ್.ಗವಾಯಿ ಅವರನ್ನು ಒಳಗೊಂಡ ಸಂಯುಕ್ತ ಪೀಠ ಹೇಳಿದೆ.
ಎಸ್ ಸಿ, ಎಸ್ ಟಿ ಅಧಿಕಾರಿಗಳ ಪ್ರಮಾಣ ಆಧರಿಸಿ

Facebook Comments