ಮತ್ತೊಂದು ಪೀಠದಿಂದ ವಿಚಾರಣೆಗೆ ಕೋರಿದ್ದ ಪ್ರಶಾಂತ್ ಪ್ರಶಾಂತ್ ಅರ್ಜಿ ವಜಾಗೊಳಿಸಿದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.20- ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ದೋಷಿಯಾಗಿರುವ ತಮ್ಮ ಶಿಕ್ಷೆಯ ಪ್ರಮಾಣ ಕುರಿತ ವಿಚಾರಣೆಯನ್ನು ಮತ್ತೊಂದು ನ್ಯಾಯ ಪೀಠದಲ್ಲಿ ನಡೆಸಲು ಮನವಿ ಮಾಡಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.

ಪ್ರಶಾಂತ್ ಭೂಷಣ್ ಪರವಾಗಿ ಹಿರಿಯ ವಕೀಲ ದುಶ್ಯಂತ್ ದುಬೆ ಸಲ್ಲಿಸಿದ್ದ ಮನವಿ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್ ಮಿಶ್ರ ನೇತೃತ್ವದ ಪೀಠ ಶಿಕ್ಷೆಯ ಪ್ರಮಾಣದ ಬಗ್ಗೆ ಮತ್ತೊಂದು ಪೀಠದಿಂದ ವಿಚಾರಣೆ ನಡೆಸಲು ಸಾಧ್ಯವಾಗದು ಎಂದು ಸ್ಪಷ್ಟಪಡಿಸಿತು.

ಆದರೆ ಈ ವಿಷಯ ಕುರಿತು ಅಂತಿಮ ತೀರ್ಮಾನದ ಪರಾಮರ್ಶೆ ನಡೆಯುವ ತನಕ ಪ್ರಶಾಂತ್ ಭೂಷಣ್ ಅವರಿಗೆ ಯಾವುದೇ ಶಿಕ್ಷೆ ವಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಭರವಸೆ ನೀಡಿದೆ.

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿ ನ್ಯಾಯಾಂಗ ನಿಂದನೆ ಆರೋಪದಲ್ಲಿ ಪ್ರಶಾಂತ್‍ಭೂಷಣ್ ದೋಷಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.ಎ

Facebook Comments

Sri Raghav

Admin