ಎಸ್ಸಿ/ಎಸ್ಟಿ ಕಾಯ್ದೆಯಡಿ ಬಂಧಿಸುವ ನಿಯಮಗಳನ್ನು ಬಿಗಿಗೊಳಿಸಿದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆ ಅಡಿ ಬಂಧನ ನಿಯಮಗಳನ್ನು ಸಡಿಲಗೊಳಿಸಿದ್ದ ತಮ್ಮ ಹಿಂದಿನ ಆದೇಶವನ್ನು ಸುಪ್ರೀಂಕೋರ್ಟ್ ಹಿಂದಕ್ಕೆ ಪಡೆದಿದೆ. ಇದರೊಂದಿಗೆ ಎಸ್ಸಿ/ಎಸ್ಟಿ ಅದಿನಿಯಮದ ಅಡಿ ಬಂಧನ ನಿಯಮಗಳು ಮತ್ತೆ ಬಿಗಿಗೊಂಡಂತಾಗಿದೆ.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಂ.ಆರ್.ಶಹಾ ಮತ್ತು ಬಿ.ಆರ್. ಗವಾಯ್ ಅವರನ್ನು ಒಳಗೊಂಡ ಪೀಠವು, ಸಮಾನತೆಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಹೋರಾಟ ಈ ದೇಶದಲ್ಲಿ ಈಗಲೂ ಮುಂದುವರಿದಿದೆ. ಈ ಜನಾಂಗದ ಜನರ ಮೇಲೆ ದೌರ್ಜನ್ಯ, ಶೋಷಣೆ ಮತ್ತು ಕಿರುಕುಳು ಈಗಲೂ ಇದೆ ಎಂದು ಹೇಳಿತು.

ಎಸ್ಸಿ/ಎಸ್ಟಿ ಜನರು ಈಗಲೂ ಸಹ ಅಸ್ಪಶ್ಯತೆ, ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುತ್ತಿದ್ದಾರೆ. ಇವುಗಳ ವಿರುದ್ಧ ಕಾಯ್ದೆಯ ಅರ್ಟಿಕಲ್ 15ರ ಅಡಿ ಭಾರತೀಯ ಸಂವಿಧಾನ ರಕ್ಷಣೆ ಒದಗಿಸಿದೆ ಎಂದು ಪೀಠವು ತಿಳಿಸಿದೆ.

ಈ ಸಂಬಂದ ಕಳೆದ ವರ್ಷ ಮಾರ್ಚ್ 20ರಂದು ತಾನು ನೀಡಿದ್ದ ನಿರ್ದೇಶನಗಳನ್ನು ಈ ಮೂಲಕ ಸುಪ್ರೀಂಕೋರ್ಟ್ ಹಿಂದಕ್ಕೆ ಪಡೆದಿದೆ. ಆದಾಗ್ಯೂ ಈ ಕಾಯ್ದೆಯ ದುರ್ಬಳಕೆ ಮತ್ತು ಸುಳ್ಳು ದೂರುಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಸುಪ್ರೀಂಕೋರ್ಟ್ ಯಾವುದೇ ಜಾತಿ ಪರವಾಗಿ ಇಲ್ಲ. ಆದರೆ ಮನುಕುಲದ ಒಳಿತಿಗಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಮಾನವ ದೋಷಕ್ಕೆ ಆಸ್ಪದವಿರಬಾದರು ಎಂದು ಪೀಠವು ತಿಳಿಸಿದೆ.

Facebook Comments