ಪರಿಶಿಷ್ಟ ಜಾತಿ (ಎಸ್‍ಸಿ) ವಿದ್ಯಾರ್ಥಿಗಳ ಗಮನಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Students--01

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಪರಿಶಿಷ್ಟ ಜಾತಿಗೆ(ಎಸ್‍ಸಿ) ಸೇರಿದ ಮತ್ತು ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪೂರ್ಣ ಪ್ರಮಾಣದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಉನ್ನತ ಶಿಕ್ಷಣ ಯೋಜನೆಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

# ಅರ್ಹತೆ : ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ 6 ಲಕ್ಷ ರೂ.ಗಳಿಗಿಂತ ಹೆಚ್ಚಿಗೆ ಇರಬಾರದು. ಇಂಥ ಅರ್ಜಿದಾರರನ್ನು ವಿದ್ಯಾರ್ಥಿ ವೇತನಕ್ಕೆ(ಸ್ಕಾಲರ್‍ಶಿಪ್) ಪರಿಗಣಿಸಲಾಗುವುದು.

# ಶುಲ್ಕ ಮತ್ತು ನಗದು ಪುರಸ್ಕಾರ : ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವುದಕ್ಕಾಗಿ ವಾರ್ಷಿಕ 2 ಲಕ್ಷ ರೂ.ಗಳ ಪೂರ್ಣ ಪಾಠ ಶುಲ್ಕ ಮತ್ತು ಹಿಂದಿರುಗಿಸಲಾಗದ ಶುಲ್ಕಗಳನ್ನು ಪಾವತಿಸಲಾಗುವುದು. ಕರ್ಮಷಿಯಲ್ ಪೈಲೆಟ್ ತರಬೇತಿಗಾಗಿ ಖಾಸಗಿ ವಲಯದ ಫ್ಲೈಯಿಂಗ್ ಕ್ಲಬ್‍ಗಳಿಗಾಗಿ ವಾರ್ಷಿಕ 3.72 ಲಕ್ಷ ರೂ.ಗಳು, ವಸತಿಗಾಗಿ ಮಾಸಿಕ 2,220 ರೂ.ಗಳು, ಪಠ್ಯ ವೆಚ್ಚಗಳಿಗಾಗಿ ಮಾಸಿಕ 3,000 ರೂ.ಗಳು ಹಾಗೂ ಕಂಪ್ಯೂಟರ್ ಮತ್ತು ಇತರ ಸಾಧನಗಳಿಗೆ 45,000 ರೂ.ಗಳನ್ನು ಅಭ್ಯರ್ಥಿಗೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15ನೇ ಡಿಸೆಂಬರ್ 2018.
ಅರ್ಜಿ ಸಲ್ಲಿಕೆ: ಆಸಕ್ತ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.  ವಿವರಗಳಿಗೆ ಸಂಪರ್ಕಿಸಿ : http://www.b4s.in/ees/TCE1
Courtesy : www.buddy4study.com

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin