ಖಾಸಗಿ ಶಾಲಾ-ಕಾಲೇಜುಗಳ ಸಂಯೋಜನೆ ಅನುಮತಿಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.19-ಪ್ರಸ್ತುತ 2020-21ನೆ ಸಾಲಿನಲ್ಲಿ ರಾಜ್ಯದಲ್ಲಿ ಖಾಸಗಿ ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಸಂಯೋಜನೆ, ಹೆಚ್ಚುವರಿ ವಿಭಾಗ, ಹೊಸ ಭಾಷೆಗೆ ಅನುಮತಿ ನೀಡುವ ಪ್ರಸ್ತಾವನೆಗಳನ್ನು ಅಂಗೀಕರಿಸಲು ಸೂಕ್ತ ನಿರ್ದೇಶನ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಶಿಕ್ಷಕರ ಮತ್ತು ಆಡಳಿತ ಮಂಡಳಿ ಫೋರಂ ಮನವಿ ಮಾಡಿದೆ.

ಫೋರಂನ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದು, ಈಗಾಗಲೇ ಹಿಂದಿನ ನಿಯಮಗಳಂತೆ ಅನುಮತಿ ಪಡೆದಿರುವ ಶಾಲಾ- ಕಾಲೇಜುಗಳಲ್ಲಿ ಅಗ್ನಿ ಅವಘಡಗಳನ್ನು ತಪ್ಪಿಸಲು ಇತರೆ ಸೌಲಭ್ಯಗಳನ್ನು ಕಲ್ಪಿಸಿರುವುದನ್ನು ದೃಢೀಕರಿಸಿಕೊಂಡು 2020-21ನೇ ಸಾಲಿನ ಪ್ರಸ್ತಾವನೆಗಳನ್ನು ಅಂಗೀಕರಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಆದರೆ,ಹೊಸದಾಗಿ ಅನುಮತಿ ಪಡೆಯುವ ಶಾಲಾ- ಕಾಲೇಜುಗಳಿಗೆ ಅಗ್ನಿ ಸುರಕ್ಷತಾ ಪ್ರಮಾಣ ಪತ್ರಗಳನ್ನು ಅಗ್ನಿ ಶಾಮಕ ಇಲಾಖೆಯಿಂದ ಕಡ್ಡಾಯಗೊಳಿಸಬೇಕು ಎಂದಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಶಾಲಾ-ಕಾಲೇಜುಗಳಿಗೆ ಕಡ್ಡಾಯವಾಗಿ ಶಾಲಾ ಕಟ್ಟಡಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಅಗ್ನಿಶಾಮಕ ಮಂಡಳಿಯಿಂದ ಪ್ರಮಾಣ ಪತ್ರಗಳನ್ನು ಪಡೆಯುವಂತೆ ಆಡಳಿತ ಮಂಡಳಿಯವರಿಗೆ ತಿಳಿಸಿದೆ. ಪ್ರಮಾಣ ಪತ್ರ ಸಲ್ಲಿಸದೇ ಇರುವ ಆಡಳಿತ ಮಂಡಳಿಗಳ ಕಡತಗಳನ್ನು ವಿಲೇ ಮಾಡದೆ ಇಟ್ಟಿರುತ್ತಾರೆ.

ವಾಸ್ತವವಾಗಿ ಅಗ್ನಿ ಶಾಮಕ ಮಂಡಳಿಯ ಬೈಲಾ ಪ್ರಕಾರ ಶಾಲೆ ಕಟ್ಟಡಗಳ ನಾಲ್ಕು ದಿಕ್ಕುಗಳಲ್ಲಿ ಕನಿಷ್ಠ 6 ಅಡಿಗಳ ಅಂತರದ ಜÁಗವನ್ನು ಖಾಲಿ ಇರಿಸಿ, ಕಡ್ಡಾಯವಾಗಿ ನೆಲ ಮಹಡಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಜÁಗವನ್ನು ಈ ಉದ್ದೇಶಕ್ಕಾಗಿ ಮೀಸಲಿಟ್ಟ ಪಕ್ಷದಲ್ಲಿ ಮಾತ್ರ ಅಗ್ನಿಶಾಮಕ ಇಲಾಖೆಯಿಂದ ಅಗ್ನಿ ಸುರಕ್ಷತೆಯ ಪ್ರಮಾಣ ಪತ್ರಗಳನ್ನು ವಿತರಿಸಲು ಅವಕಾಶ ಇರುತ್ತದೆ.

ಅದರಂತೆ ಅಸ್ತಿತ್ವದಲ್ಲಿ ಇರುವಂತಹ ಶಾಲಾ-ಕಾಲೇಜು ಕಟ್ಟಡಗಳಲ್ಲಿ ಈ ರೀತಿಯ ಅವಕಾಶ ಕಲ್ಪಿಸಲಾಗಿಲ್ಲ. ಈ ಶಾಲಾ ಕಾಲೇಜುಗಳು ಅನುಮತಿ ಪಡೆದ ಅವಧಿಯಲ್ಲಿ ಜಾರಿಯಲ್ಲಿದ್ದ ಮಾನದಂಡಗಳ ಅನುಸಾರ ಅವರು ಅನುಮತಿ ಪಡೆದಿದ್ದು, ಇಂತಹ ಕಟ್ಟಡಗಳಲ್ಲಿ ಈ ಸೌಲಭ್ಯಗಳನ್ನು ಕಲ್ಪಿಸಲು ಯಾವುದೇ ರೀತಿಯಲ್ಲಿ ಸಾಧ್ಯವಿಲ್ಲ.

ಅಗ್ನಿ ಸುರಕ್ಷತ ಪ್ರಮಾಣ ಪತ್ರ ಇಲ್ಲದೆ ಮಾನ್ಯತೆ ಮತ್ತು ಸಂಯೋಜನೆ ಕಡತಗಳನ್ನು ಇತ್ಯರ್ಥ ಪಡಿಸದೇ ಬಾಕಿ ಉಳಿಸಿಕೊಂಡಿರುವುದರಿಂದ ಅನೇಕ ಶಾಲೆಗಳ ಆರ್‍ಟಿಇ ಶುಲ್ಕ ಮರು ಪಾವತಿ, ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳ ನೋಂದಣಿ, ಶಾಲಾ, ಕಾಲೇಜುಗಳ ಇನ್ನಿತರ ಎಲ್ಲಾ ಕಾರ್ಯಗಳು ಸ್ಥಗಿತಗೊಂಡು ಶಿಕ್ಷಕರು, ಸಿಬ್ಬಂದಿಯ ವೇತನ ಸಹ ಆಡಳಿತ ಮಂಡಳಿಯವರು ಪಾವತಿ ಮಾಡಲು ಕಷ್ಟ ಸಾಧ್ಯವಾಗಿದೆ ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.

Facebook Comments