ವೈಜ್ಞಾನಿಕ ಸಂಸ್ಥೆಗಳನ್ನು ನಿರ್ಮಿಸಿದ್ದು ನೆಹರು ಅಲ್ಲ ಮೊದಲಿಯಾರ್, ಮುಖರ್ಜಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.22-ನಮ್ಮಲ್ಲಿ ಎರಡು ರೀತಿಯ ಜನರಿರುತ್ತಾರೆ. ಕೆಲಸ ಮಾಡುವವರದ್ದು ಒಂದು ಗುಂಪಾದರೆ, ಅನ್ಯರು ಮಾಡಿದ ಕೆಲಸವನ್ನು ತಾವೇ ಮಾಡಿದ್ದು ಎಂದು ಅದರ ಲಾಭವನ್ನು ಪಡೆಯುವುದು ಇನ್ನೊಂದು ಗುಂಪು- ಹೀಗೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಒಮ್ಮೆ ಹೇಳಿದ್ದರು.

ವಾಸ್ತವ ಸಂಗತಿ ಎಂದರೆ ಅವರ ಕುಟುಂಬದ ಕೆಲವು ಸದಸ್ಯರು ಅನ್ಯರು ಮಾಡಿದ ಕೆಲಸವನ್ನು ತಾವೇ ಮಾಡಿದ್ದು ಎಂದು ಪ್ರಚಾರ ಗಿಟ್ಟಿಸಿಕೊಂಡಿರುವುದು ಸುಳ್ಳೆನಲ್ಲ ಎಂದು ಬಿಜೆಪಿ ಮೊದಲಿನಿಂದಲೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದೆ.

ಇನ್ನೊಂದೆಡೆ ಕಾಂಗ್ರೆಸ್ ಭಾರತದಲ್ಲಿ ಮಹತ್ವದ ಸಂಸ್ಥೆಗಳ ಸ್ಥಾಪನೆಗೆ ಸ್ವಾತಂತ್ರ್ಯ ಭಾರತದ ಪ್ರಥಮ ಪ್ರಧಾನಮಂತ್ರಿ ನೆಹರು ಕಾರಣ ಎಂದು ವಾದಿಸುತ್ತಲೇ ಇದೆ. ಉದಾಹರಣೆಗೆ ಕಾಂಗ್ರೆಸ್ ಮುಖಂಡ ಶಶಿ ತರೂರ್. ಭಾರತದಲ್ಲಿ ಮಹತ್ವದ ವೈಜ್ಞಾನಿಕ ಸಂಸ್ಥೆಗಳ ಸ್ಥಾಪನೆಗೆ ನೆಹರು ಕಾರಣ ಎಂದು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ಧಾರೆ.

ಇದಕ್ಕೆ ಪುಷ್ಟಿ ನೀಡುವಂತೆ ಭಾರತದಲ್ಲಿ ಅಗ್ರಮಾನ್ಯ ವೈಜ್ಞಾನಿಕ ಸಂಸ್ಥೆಗಳ ಸಂಸ್ಥಾಪಕ ನೆಹರು ಅಲ್ಲ. ಅವುಗಳ ರೂವಾರಿ ಅರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಮತ್ತು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಎಂಬುದು ಸಾಬೀತಾಗಿದೆ. ಇದು ಆಗಾಗ ದೃಢಪಡುತ್ತಿದೆ ಕೂಡ.

ಮೊದಲಿಯಾರ್ ಅವರು 1940ರಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್‍ಐಆರ್) ನಿರ್ಮಿಸಲು ಅಹರ್ನಿಶಿ ಶ್ರಮಿಸಿದರು. ಅದೇ ರೀತಿ ಮುಖರ್ಜಿ ಅವರು ಕೂಡ ಇದನ್ನು ಸ್ಥಾಪಿಸಲು ಬಹುವಾಗಿ ಶ್ರಮಿಸಿದರು. ಇದರೊಂದಿಗೆ ಅನೇಕ ಪ್ರಯೋಗಾಲಯಗಲು ಕೂಡ ಅಸ್ತಿತ್ವಕ್ಕೆ ಬಂತು.

ಇದು ಸಂಸ್ಥಾಪನೆಯಾಗುತ್ತಿದ್ದಂತೆ ಇದರ ಕ್ರೆಡಿಟ್ ನಿರಾಯಾಸವಾಗಿ ನೆಹರು ಅವರಿಗೆ ಸಂದಾಯವಾಯಿತು. ಇಂಥ ವಿಷಯಗಳಲ್ಲಿ ನೆಹರು ತಾತ್ಸಾರ ಮನೋಭಾವ ಹೊಂದಿದ್ದರು, ಆದರೆ ಇದು ನಿರ್ಮಾಣವಾದ ನಂತರ ಇದರ ಸಾಮಥ್ರ್ಯವನ್ನು ಮನಗಂಡು ಇದರ ಹಿಂದಿನ ರೂವಾರಿ ತಾವೇ ಎಂದು ಬಿಂಬಿಸಿಕೊಂಡರು ಎಂಬ ಬಗ್ಗೆ ಹಿರಿಯ ವಿಜ್ಞಾನಿಗಳು ಈಗಲೂ ಬೇಸರ ವ್ಯಕ್ತಪಡಿಸುತ್ತಾರೆ.

ಅದೇ ರೀತಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ ಹಾಗೂ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಎಐಐಎಂಎಸ್) ಸ್ಥಾಪನೆಗೂ ಜವಹರ್‍ಲಾಲ್ ನೆಹರು ಅವರಿಗೂ ಸಂಬಂದವಿಲ್ಲ. ಆದರೂ ಇವುಗಳ ಸ್ಥಾಪನೆಯ ಕ್ರೆಡಿಟ್ ಕೂಡ ಭಾರತದ ಪ್ರಥಮ ಪ್ರಧಾನಮಂತ್ರಿ ಪಾಲಾಯಿತು.

ಸ್ವಾತಂತ್ರ್ಯ ನಂತರ ದೇಶವನ್ನು ಮುನ್ನಡೆಸಬೇಕಾದ ಮತ್ತು ರಾಜಿಕೀಯ ಜಂಜಾಟಗಳ ನಿವಾರಣೆಗೆ ಹೆಚ್ಚು ನಿಗಾ ವಹಿಸಿದ್ದ ನೆಹರು ಅವರಿಗೆ ಇಂಥ ಸಂಸ್ಥೆಗಳ ಪ್ರಾಮುಖ್ಯತೆ ತಿಳಿದಿರಲಿಲ್ಲ. ಮೊದಲಿಯಾರ್ ಮತ್ತು ಮುಖರ್ಜಿ ಅವರಂಥ ದೂರದೃಷ್ಟಿಯುಳ್ಳ ಧೀಮಂತ ವ್ಯಕ್ತಿಗಳಿಗೆ ಈ ಯೋಜನೆಗಳು ಸಾಕಾರಗೊಂಡು, ಅನಾಯಾಸವಾಗಿ ಇವುಗಳ ಕ್ರೆಡಿಟ್‍ನನ್ನು ನೆಹರು ಪಡೆದುಕೊಂಡರು ಎಂಬ ಅಸಮಾಧಾನ ಈಗಲೂ ಆ ಕಾಲದ ಗಣ್ಯರ ವಂಶದವರಲ್ಲಿ ಹೊಗೆಯಾಡುತ್ತಿದೆ.

ಇಂಥ ಉದಾಹರಣೆಗಳು ಸಾಕಷ್ಟಿವೆ. ಅನ್ಯರು ಮಾಡಿದ ಮಹತ್ವದ ಕೆಲಸ-ಕಾರ್ಯಗಳ ಫಲಶೃತಿಯನ್ನು ನೆಹರು ಪಡೆದುಕೊಂಡು ಬೀಗಿದ್ದಾರೆ ಬಿಜೆಪಿ ಹಿರಿಯ ನಾಯಕರು ಅಗಾಗ ಆರೋಪಿಸುತ್ತಲೇ ಇರುತ್ತಾರೆ.

ಭಾರತ ಕಳೆದ ತಿಂಗಳು ಅಂತರಿಕ್ಷದಲ್ಲಿ ಆತಂಕಕಾರಿ ಉಪಗ್ರಹವನ್ನು ಹೊಡೆದುರುಳಿಸುವ ಮಿಷನ್ ಶಕ್ತಿ ಪ್ರಯೋಗ ನಡೆಸಿದಾಗಲೂ ಅದರ ಕ್ರೆಡಿಟ್‍ನನ್ನು ನೆಹರು ಅವರಿಗೆ ನೀಡಲು ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ನೀಡಲು ಯತ್ನಿಸಿದರು. ಆದರೆ ಈ ಅತ್ಯಾಧುನಿಕ ತಂತ್ರಜ್ಞಾನಕ್ಕೂ ಮತ್ತು ನೆಹರೂ ಅವರಿಗೂ ಲವಲೇಶವೂ ಸಂಬಂಧವಲ್ಲ.

ಇದು ಭಾರತ ರಕ್ಷಣಾ ಇಲಾಖೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ(ಡಿಆರ್‍ಡಿಓ) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಪರಿಶ್ರಮದ ಫಲವೇ ಹೊರತು, ಅದು ಎಂದಿಗೂ ನೆಹರು ಅವರ ಆಗಿನ ದೂರದೃಷ್ಟಿಯ ಪರಿಕಲ್ಪನೆಯಂತೂ ಅಲ್ಲವೇ ಅಲ್ಲ.

Facebook Comments

Sri Raghav

Admin