ಭಾರತದ ಆಶೋತ್ತರ ಅಗತ್ಯಗಳ ಸಾಕಾರಗೊಳಿಸಿ : ವಿಜ್ಞಾನಿಗಳಿಗೆ ಪ್ರಧಾನಿ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.15- ದೇಶವು ಪ್ರಶ್ತುತ ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವತ್ತ ಸೂಕ್ತ ಗಮನಹರಿಸುವಂತೆ ವಿಜ್ಞಾನಿಗಳ ಸಮುದಾಯಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಆಶೋತ್ತರ ಅಗತ್ಯಗಳನ್ನೂ ಕೂಡ ಸಾಕಾರಗೊಳಿಸುವಂತೆ ಸಲಹೆ ಮಾಡಿದ್ದಾರೆ. ಕೃಷಿ ಉತ್ಪನ್ನಗಳಲ್ಲಿ ಮೌಲ್ಯ ವರ್ಧನೆ ಒದಗಿಸುವೆ ಮೂಲಕ ಅಪೌಷ್ಟಿಕತೆಯಂಥ ಸಮಸ್ಯೆಗಳನ್ನು ನಿವಾರಿಸಬೇಕು. ಆಲ ಸಂಪನ್ಮೂಲ ರಕ್ಷಣೆಗೆ ಅಗತ್ಯವಾದ ಹೊಸ ಸಂಶೋಧನೆಯನ್ನು ನಡೆಸಬೇಕೆಂದು ಅವರು ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಕರೆ ನೀಡಿದರು.

ದೆಹಲಿಯಲ್ಲಿ ಇಂದು ನಡೆದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‍ಐಆರ್)ಯ ಸಭೆಯೊಂದರ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋದಿ, 5-ಜಿ ವೈರ್‍ಲೆಸ್ ತಂತ್ರಜ್ಞಾನ, ಕೃತಕ ಬುದ್ದಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್), ನವೀಕರಿಸಬಹುದಾದ ಇಂಧನಕ್ಕಾಗಿ ಕೈಗೆಟುಕುವ ಮತ್ತು ದೀರ್ಘಬಾಳಿಕೆಯ ಬ್ಯಾಟರಿಗಳನ್ನು ತಯಾರಿಸಬೇಕೆಂದು ತಿಳಿಸಿದರು.

ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕು. ಇದರಿಂದ ವಿಜ್ಞಾನವನ್ನು ದೇಶದ ಪ್ರತಿ ಮೈಮೂಲೆಯಲ್ಲಿನ ಎಲ್ಲ ವಿದ್ಯಾರ್ಥಿಗಳಿಗೂ ಇದನ್ನು ತಲುಪಿಸಿದಂತಾಗುತ್ತದೆ. ವಿಜ್ಞಾನದತ್ತ ವಿದ್ಯಾರ್ಥಿಗಳನ್ನು ಹೆಚ್ಚು ಆಕರ್ಷಿಸಲು ಮುಂದಿನ ಜನಾಂಗಕ್ಕಾಗಿ ವೈಜ್ಞಾನಿಕ ಕುಶಾಗ್ರಮತಿಯನ್ನು ಮತ್ತಷ್ಟು ಬಲಗೊಳಿಸಬೇಕೆಂದು ಅವರು ಹೇಳಿದರು.

ವಿಶ್ವದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಃಇಸುತ್ತಿರುವ ಭಾರತೀಯರಲ್ಲಿ ಸಂಶೋಧನೆ ಮತ್ತು ಅಭಿವೃದ್ದಿ ಯೋಜನೆಗಳಲ್ಲಿ ಸಹಭಾಗಿತ್ವ ವರ್ಧನೆಗೆ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ತಿಳಿಸಿದರು. ದೇಶದ ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಅವರು ಸಿಎಸ್‍ಐಆರ್‍ನಲ್ಲಿನ ವಿಜ್ಞಾನ ಸಮುದಾಯಕ್ಕೆ ಸಲಹೆ ಮಾಡಿದರು.

Facebook Comments