ಎಸ್‍ಎಸ್‍ಎಲ್‍ಸಿ ಪರಿಕ್ಷಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ವತಿಯಿಂದ ಮಾಸ್ಕ್

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಮೇ 27- ಎಸ್‍ಎಸ್‍ಎಲ್‍ಸಿ ಪರೀಕ್ಷಾರ್ಥಿಗಳಿಗೆ ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಬಿಇಒ ಕೃಷ್ಣಮೂರ್ತಿ ಅವರ ಸೂಚನೆ ಮೇರೆಗೆ ಮಾಸ್ಕ್‍ಗಳನ್ನು ತಯಾರಿಸಿ ಉಚಿತವಾಗಿ ವಿತರಿಸಲಾಗುವುದು ಎಂದು ಸ್ಥಳೀಯ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಘಟಕದ ಕಾರ್ಯದರ್ಶಿ ಸಿದ್ದೇಶ್ವರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಗಂಭೀರದ ಸಂಗತಿಯಾಗಿದೆ. ಸೊಂಕು ಹರಡುವುದನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯತಂತ್ರಗಳಿಗೆ ಮತ್ತು ಸೂಚನೆಗೆ ಜನ ಸಾಮಾನ್ಯರ ಸಹಕಾರವು ಬೇಕಾಗುತ್ತದೆ ಎಂದು ಹೇಳಿದರು.

ತಾಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಹಾಜರಾಗಲಿರುವ ವಿದ್ಯಾರ್ಥಿಗಳಿಗಾಗಿ ಸುಮಾರು 4 ಸಾವಿರ ಮಾಸ್ಕ್‍ಗಳನ್ನು ಸ್ಕೌಟ್ ಮಾಸ್ಟರ್ ಗೈಡ್ ಕ್ಯಾಪ್ಟನ್ ರೋವಸ್ರ್Àಗಳಾದ ನೇತ್ರಾವತಿ, ನಾಗೇಶ್, ನಾಗಲಕ್ಷ್ಮಿ, ವೀಣಾ ಮತ್ತು ಗೈಡ್ ಕ್ಯಾಪ್ಟನ್ ರೇಂಜರ್ಸ್‍ಗಳಾದ ಮಮತಾ, ನಳಿನಾ, ರಂಜಿತಾ, ಸುಷ್ಮಾ ಮುಂತಾದವರು ಮಾಸ್ಕ್ ತಯಾರಿಸುವ ನೇತೃತ್ವ ವಹಿಸಿದ್ದಾರೆ ಎಂದು ತಿಳಿಸಿದರು.

ದಾನಿಗಳ ಸಹಕಾರ: ಮಾಸ್ಕ್ ತಯಾರಿಲು ಶ್ರೀನಿವಾಸ ವಿದ್ಯಾಸಂಸ್ಥೆ ಸೇರಿದಂತೆ ಕೆಲವು ಸಂಘ-ಸಂಸ್ಥೆಗಳು ಹಾಗೂ ದಾನಿಗಳು ಬಟ್ಟೆಗಳನ್ನು ನೀಡುವ ಮೂಲಕ ಸಹಕಾರ ನೀಡುತ್ತಿದ್ದಾರೆ. ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಸ್ಥಳೀಯ ಘಟಕದ ಕಾರ್ಯಕರ್ತರಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಕೈಗಳಿಗೆ ಸೊಂಕು ನಿವಾರಕಗಳನ್ನು ಸಿಂಪಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಇದೇ ವೇಳೆ ಸಿದ್ದೇಶ್ವರ ತಿಳಿಸಿದರು.

Facebook Comments