ಎಸ್‍ಡಿಪಿಐ ಮತ್ತು ಕೆಎಫ್‍ಡಿ ಸಂಘಟನೆಗಳ ನಿಷೇಧಕ್ಕೆ ಸರ್ಕಾರ ತೀರ್ಮಾನ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.13- ರಾಜ್ಯದ ವಿವಿಧೆಡೆ ನಡೆದಿರುವ ಕೋಮು ಸಂಘರ್ಷ, ಬಿಜೆಪಿ ನಾಯಕರು, ಹಿಂದೂ ಮುಖಂಡರ ಹತ್ಯೆಗೆ ಸಂಚು, ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇರೆಗೆ ಎಸ್‍ಡಿಪಿಐ ಮತ್ತು ಕೆಎಫ್‍ಡಿ ಸಂಘಟನೆಗಳನ್ನು ನಿಷೇಸಲು ನಿರ್ಧರಿಸಲಾಗಿದೆ.

ನಿಷೇಧಕ್ಕೆ ಈಗಾಗಲೇ ಕ್ರಮಗಳನ್ನು ಆರಂಭಿಸಿದ್ದು, ಇವರೆಡೂ ಸಂಘಟನೆಗಳ ಬಗ್ಗೆ ಪೊಲೀಸರಿಂದ ವಿವರವಾದ ವರದಿ ಕೇಳಲಾಗಿದೆ. ವರದಿ ಸಲ್ಲಿಕೆಯಾದ ತಕ್ಷಣ ಕಾನೂನು ಇಲಾಖೆ ಜೊತೆ ಚರ್ಚಿಸಿ ಕೇಂದ್ರಕ್ಕೆ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ರಾಜ್ಯದ ಹಲವೆಡೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ, ಮಂಗಳೂರು ಹಿಂಸಾಚಾರಕ್ಕೆ ಈ ಸಂಘಟನೆಗಳೇ ಕಾರಣವಾಗಿದ್ದು, ಇವುಗಳು ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಸಿದಂತೆ ಸಮಗ್ರ ಮಾಹಿತಿ ಕಲೆ ಹಾಕಲಾಗಿದ್ದು, ಈ ಸಂಘಟನೆಗಳನ್ನು ನಿಷೇಸುವ ಬಗ್ಗೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಒಲವು ತೋರಿದ್ದಾರೆ.

ಅಲ್ಲದೆ ಕೆಲವು ಸಂಘಟನೆಗಳು ಹಾಗೂ ಎಸ್‍ಡಿಪಿಐ ಮತ್ತು ಕೆಎಫ್‍ಡಿ ಸಂಘಟನೆಗಳ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಸುವಂತೆ ಸರ್ಕಾರಕ್ಕೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ.

ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಈ ಸಂಘಟನೆಗಳನ್ನು ನಿಷೇಸಲು ಕೇಂದ್ರಕ್ಕೆ ವರದಿಯನ್ನು ನೀಡಲಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.

ಈ ಹಿಂದೆ ಕೇಂದ್ರ ಸರ್ಕಾರದ ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಸಿ ರಾಜ್ಯದ ಹಲವೆಡೆ ಕೋಮುಗಲಭೆ ಸಂಭವಿಸಿತ್ತು. ಅದರಲ್ಲೂ ಮಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್‍ಗೆ ಇಬ್ಬರು ಬಲಿಯಾಗಿದ್ದರು.

ಈ ಗಲಭೆಗೆ ಕೇರಳದಿಂದ ಆಗಮಿಸಿದ್ದ ಎಸ್‍ಡಿಪಿಐ ಕಾರ್ಯಕರ್ತರೇ ಕಾರಣಕರ್ತರು ಎಂಬ ಆರೋಪ ಕೇಳಿಬಂದಿತ್ತು. ಟಿಪ್ಪು ಸುಲ್ತಾನ್ ಜಯಂತಿ ವಿರೋಸಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆದ ವೇಳೆ ವಿಎಚ್‍ಪಿಯ ಕುಟ್ಟಪ್ಪ ಎಂಬ ಕಾರ್ಯಕರ್ತ ಸಾವನ್ನಪ್ಪಿದ್ದರು.

ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ನಡೆದ ಘರ್ಷಣೆಯಲ್ಲೂ ಎಸ್‍ಡಿಪಿಐ ಕಾರ್ಯಕರ್ತರು ಶಾಮೀಲಾಗಿದ್ದರು ಎಂದು ಹೇಳಲಾಗಿದೆ. ಶಿವಮೊಗ್ಗದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ವೇಳೆ ನಡೆದ ಗಲಭೆಯಲ್ಲಿ ಸಾರ್ವಜನಿಕರೊಬ್ಬರು ಸಾವನ್ನಪ್ಪಿದ್ದರು.

ಶಿವಮೊಗ್ಗದಂತಹ ಶಾಂತಿಪ್ರಿಯ ಜಿಲ್ಲೆಯಲ್ಲಿ ಏಕಾಏಕಿ ಕೋಮುಗಲಭೆ ಉಂಟಾಗಲು ಎಸ್‍ಡಿಪಿಐ ದುಷ್ಕರ್ಮಿಗಳೇ ಕಾರಣ ಎನ್ನಲಾಗುತ್ತಿದೆ. ಹೀಗೆ ರಾಜ್ಯದ ಬಹುತೇಕ ಕಡೆ ಸಂಭವಿಸಿದ ಗಲಭೆಗಳಿಗೆ ಎಸ್‍ಡಿಪಿಐ ಮತ್ತು ಕೆಎಫ್‍ಡಿ ಸಂಘಟನೆಗಳೇ ಕಾರಣ ಎನ್ನಲಾಗುತ್ತಿದೆ.

ಈ ಹಿಂದೆ ನಿಷೇಧಕ್ಕೊಳಗಾಗಿದ್ದ ಸಿಮಿ ಸಂಘಟನೆಯ ತದ್ರೂಪದಂತೆ ಎಸ್‍ಡಿಪಿಐ ಮತ್ತು ಕೆಎಫ್‍ಡಿ ಕಾರ್ಯ ನಿರ್ವಹಿಸುತ್ತಿವೆ. ಸಿಮಿ ಸಂಘಟನೆಯಲ್ಲಿದ್ದ ಬಹುತೇಕರು ಈಗ ಇದರಲ್ಲಿ ಈಗ ಗುರುತಿಸಿಕೊಂಡಿದ್ದಾರೆ.

ಈ ಸಂಘನೆಗಳನ್ನು ನಿಷೇಸುವಂತೆ ಬಿಜೆಪಿ ಸೇರಿದಂತೆ ಹಲವು ಮುಖಂಡರು ಒತ್ತಡ ಹೇರಿದ್ದರು. ಬೆಂಗಳೂರು, ಮಂಗಳೂರಿನಲ್ಲಿ ಸಾಕಷ್ಟು ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿದ್ವು ಈ ಜಾಗಗಳನ್ನ ಬೇಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಎರಡೂ ಗುಂಪುಗಳು ಸಾಕಷ್ಟು ಚಟುವಟಿಕೆಗಳಲ್ಲಿ ಭಾಗಿಯಾಗಿವೆ.

ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರ ಈ ಸಂಘಟನೆಗಳ ಮೇಲೆ ಹೂಡಲಾಗಿದ್ದ ಪ್ರಕರಣಗಳನ್ನು ತೆಗೆದಾಕಿತ್ತು. ಇಷ್ಟಾದರೂ ಈ ಸಂಘಟನೆಗಳು ತಮ್ಮ ಚಟುವಟಿಕೆ ನಿಲ್ಲಿಸಿರಲಿಲ್ಲ. ಬೇರೆ ಬೇರೆ ದೇಶದಲ್ಲಿರುವ ಸಂಘಟನೆಗಳ ಜತೆಯೂ ಇವು ಸಂಪರ್ಕ ಹೊಂದಿವೆ.

ಹೆಸರುಗಳನ್ನು ಬದಲಾವಣೆ ಮಾಡಿಕೊಂಡು ಈ ಸಂಘಟನೆಗಳು ತಮ್ಮ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿವೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಎಸ್.ಡಿ.ಪಿ.ಐ ಮತ್ತು ಕೆ.ಎಫ್.ಡಿ ಸಂಘಟನೆಗಳ ಮೇಲೆ ಅಲ್ಲಿನ ಬಿಜೆಪಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ.

ಬೆಂಗಳೂರು, ಮೈಸೂರು, ಮಂಗಳೂರು ಮೊದಲಾದ ಕಡೆಗಳಲ್ಲಿ ಭಯೋತ್ಪಾದನಾ ಚಟುವಟಿಕೆಯ ಸಂಚು ನಡೆಸುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಭೇಸಿದ್ದಾರೆ.

ಹಿಂದೆ ಹಲವಾರು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಸ್ ಡಿಪಿಐ, ಪಿಎಫ್ ಐ, ಕೆ.ಡಿ.ಎಫ್ ಸಂಘಟನೆಯ ಮೇಲೆ ಹಾಕಲಾಗಿದ್ದ ಪ್ರಕರಣಗಳನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿತ್ತು. ನಂತರ ಈ ಸಂಘಟನೆಗಳಿಂದ ಹತ್ಯೆ, ಹತ್ಯೆ ಯತ್ನ, ಹಿಂಸಾಚಾರ ಸಹ ನಡೆದಿತ್ತು.

ಈ ಸಂಘಟನೆಗಳಿಗೆ ದೇಶದ ಹೊರಗಿನ ಉಗ್ರಗಾಮಿ ಸಂಘಟನೆಗಳ ಸಂಪರ್ಕ ಇರುವುದೂ ಕೂಡ ಗೊತ್ತಾಗಿದೆ. ಈ ಸಂಘಟನೆಗಳು ಕಾಲಕಾಲಕ್ಕೆ ಹೆಸರು ಬದಲಾವಣೆ ಮಾಡಿಕೊಂಡಿವೆ. ಈಗ ಪಿಎಫ್‍ಐ ಹಾಗೂ ಎಸ್ ಡಿಪಿಐ ಹೆಸರಿನಿಂದ ಕಾರ್ಯಾಚರಣೆ ನಡೆಸುತ್ತಿವೆ.

ಹಾಗಾಗಿ ಉತ್ತರ ಪ್ರದೇಶ ಮಾದರಿಯಲ್ಲಿ ಈ ಸಂಘಟನೆಗಳ ನಿಷೇಧಕ್ಕೆ ಅಗತ್ಯ ತಯಾರಿ ಮಾಡಲಾಗಿದ್ದು, ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ.  ನಂತರ ಕಾನೂನು ಇಲಾಖೆಯೊಂದಿಗೆ ಸಮಾಲೋಚನೆ ಮಾಡಿ ನಿಷೇಧಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಸೂಕ್ತ ಶಿಫಾರಸ್ಸು ಮಾಡಲು ಸರ್ಕಾರ ಮುಂದಾಗಿದೆ.

Facebook Comments

Sri Raghav

Admin