ಎಸ್‍ಡಿಪಿಐ ನಿಷೇಧ ಕುರಿತು ಸಂಪುಟದಲ್ಲಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.16- ವಿವಾದಕ್ಕೆ ಕಾರಣವಾಗಿರುವ ಎಸ್‍ಡಿಪಿಐ ಪಕ್ಷವನ್ನು ನಿಷೇಸುವ ಕುರಿತು ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಅರಣ್ಯ ಸಚಿವ ಆನಂದ್‍ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಬಳಿಕ ಎಸ್‍ಡಿಪಿಐ ಸಂಘಟನೆಯನ್ನು ನಿಷೇಸಬೇಕೆಂದು ಭಾರೀ ಒತ್ತಡಗಳು ಕೇಳಿಬರುತ್ತಿವೆ. ಗಲಭೆ ಪ್ರಕರಣದಲ್ಲಿ ಎಸ್‍ಡಿಪಿಐ ನಾಯಕರು, ಕಾರ್ಯಕರ್ತರು ಬಂಧನಕ್ಕೊಳಗಾಗಿದ್ದಾರೆ.

ಜತೆಗೆ ಈ ಮೊದಲು ನಡೆದ ಹಲವಾರು ಅಪರಾಧ ಪ್ರಕರಣಗಳಲ್ಲಿ ಎಸ್‍ಡಿಪಿಐ ಕಾರ್ಯಕರ್ತರ ಕೈವಾಡವಿದೆ ಎಂಬ ಆರೋಪಗಳಿವೆ. ಹೀಗಾಗಿ ಪೊಲೀಸ್ ಇಲಾಖೆ ನಿರಂತರವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ನಿಷೇಧಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿದೆ.

ಈ ಮೊದಲೇ ಸಿದ್ದರಾಮಯ್ಯ ಅವರ ಸರ್ಕಾರದ ಅವಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟುಮಾಡುವ ಆರೋಪದ ಮೇಲೆ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂಬ ಪ್ರಸ್ತಾವನೆ ಚರ್ಚೆಗೆ ಬಂದಿತ್ತು.

ಆದರೆ, ಎಸ್‍ಡಿಪಿಐ ರಾಷ್ಟ್ರೀಯ ಮಟ್ಟದ ಸಂಘಟನೆಯಾಗಿದ್ದು, ರಾಜಕೀಯ ಪಕ್ಷ ಕೂಡ ಆಗಿದೆ. ಕರ್ನಾಟಕ ಒಂದರಲ್ಲೇ ನಿಷೇಧ ಮಾಡಿದರೆ ಪ್ರಯೋಜನವಾಗುವುದಿಲ್ಲ. ಕೇಂದ್ರ ಸರ್ಕಾರ ನಿಷೇಧ ಮಾಡಬೇಕು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ನಿಷೇಧದ ಪ್ರಸ್ತಾವನೆಯನ್ನು ನೆನೆಗುದಿಗೆ ಬಿಟ್ಟಿದ್ದರು.

ಬಿಜೆಪಿ ಆಗಿನಿಂದಲೂ ಈ ಸಂಘಟನೆಗಳ ನಿಷೇಧಕ್ಕೆ ಭಾರೀ ಒತ್ತಡ ಹೇರುತ್ತಲೇ ಇದೆ. ಈಗ ರಾಜ್ಯ ಮತ್ತು ಕೇಂದ್ರದಲ್ಲಿ ಎರಡೂ ಕಡೆ ಬಿಜೆಪಿಯೇ ಅಕಾರದಲ್ಲಿರುವುದರಿಂದ ಮತ್ತು ಕೆಲವು ಘಟನೆಗಳಲ್ಲಿ ಎಸ್‍ಡಿಪಿಐ ಹೆಸರು ಕೇಳಿಬಂದಿರುವುದರಿಂದ ನಿಷೇಧದ ಪ್ರಸ್ತಾವನೆಗೆ ಮತ್ತೆ ಬಲ ಸಿಕ್ಕಂತಾಗಿದೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಆನಂದ್‍ಸಿಂಗ್ ಅವರು, ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ವರದಿ ಬಳಿಕ ವಾಸ್ತವಾಂಶ ತಿಳಿಯಲಿದೆ.

ಅಂದು ಏಕಾಏಕಿ ಗಲಾಟೆ ನಡೆದಿದ್ದರಿಂದಾಗಿ ಶಾಸಕರ ಮನೆಗೆ ರಕ್ಷಣೆ ನೀಡಲಾಗಲಿಲ್ಲ. ಆದರೆ, ನಮ್ಮ ಸರ್ಕಾರ ಎಲ್ಲೂ ವೈಫಲ್ಯ ಅನುಭವಿಸಿಲ್ಲ. ಕಾನೂನು ಸುವ್ಯವಸ್ಥೆ ರಕ್ಷಣೆಯಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

Facebook Comments

Sri Raghav

Admin