ಏಷ್ಯಾದ ಅತಿ ದೊಡ್ಡ ಕೊರೊನಾ ಕೇರ್ ಸೆಂಟರ್ ಇಂದಿನಿಂದ ಓಪನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.27-ಅಂತೂ ಇಂತೂ ಏಷ್ಯಾದ ಅತಿ ದೊಡ್ಡ ಕೊರೊನಾ ಕೇರ್ ಸೆಂಟರ್ ಇಂದಿನಿಂದ ಕಾರ್ಯಾರಂಭ ಮಾಡಲಿದೆ. ಅಗ್ನಿಶಾಮಕ ದಳದಿಂದ ಅನುಮತಿ ದೊರೆತಿರುವ ಹಿನ್ನಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಸ್ಥಾಪನೆ ಮಾಡಿರುವ ಕೊರೊನಾ ಕೇರ್ ಸೆಂಟರ್ ಇಂದು ಸಂಜೆ ಓಪನ್ ಆಗಲಿದೆ.

10,100 ಹಾಸಿಗೆ ವ್ಯವಸ್ಥೆ ಹೊಂದಿರುವ ಬಿಐಇಸಿ ಕೇಂದ್ರದಲ್ಲಿ ಸಂಜೆಯಿಂದ 5 ಸಾವಿರ ಹಾಸಿಗೆಗಳು ಲಭ್ಯವಾಗಲಿದೆ. ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿರುವ ಕೇರ್ ಸೆಂಟರ್‍ಗೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಈಗಾಗಲೇ ವೈದ್ಯರು ಮತ್ತು ನರ್ಸ್‍ಗಳನ್ನು ನೇಮಕ ಮಾಡಿದೆ.

ಉಳಿದ ಹಾಸಿಗೆಗಳ ವ್ಯವಸ್ಥೆಯನ್ನು ಅದಷ್ಟು ಶೀಘ್ರ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಏಷ್ಯಾದ ಅತಿ ದೊಡ್ಡ ಕೊರೊನಾ ಕೇರ್ ಸೆಂಟರ್ ಹೆಗ್ಗಳಿಕೆಯ ಬಿಐಇಸಿ ಕೇಂದ್ರ ಆರಂಭದಿಂದ ನಗರದಲ್ಲಿ ಕೊರೊನಾ ಪೀಡಿತರಾಗಿದ್ದ ಕಾಡುತ್ತಿದ್ದ ಹಾಸಿಗೆ ಅಭಾವದ ವ್ಯವಸ್ಥೆ ಸರಿಹೋಗಲಿದೆ.

ಬಿಐಇಸಿ ಕೇಂದ್ರ ಆರಂಭ ಕುರಿತಂತೆ ಸರ್ಕಾರ ಮತ್ತು ಗುತ್ತಿಗೆದಾರರ ನಡುವೆ ಬಿಕ್ಕಟ್ಟು ಉಲ್ಬಣಗೊಂಡಿದ್ದರಿಂದ ಕೊರೊನಾ ಕೇರ್ ಸೆಂಟರ್ ಆರಂಭಕ್ಕೆ ವಿಘ್ನ ಎದುರಾಗಿತ್ತು.

ಬಿಬಿಎಂಪಿ ಆಯುಕ್ತರಾಗಿ ನಿಯೋಜನೆಗೊಂಡ ಮಂಜುನಾಥ್ ಪ್ರಸಾದ್ ಅವರು ಗುತ್ತಿಗೆದಾರರೊಂದಿಗ ನಡೆಸಿದ ಮಾತುಕತೆ ಯಶಸ್ವಿಯಾದ ಹಿನ್ನಲೆಯಲ್ಲಿ ಕೊರೊನಾ ಕೇರ್ ಸೆಂಟರ್ ಆರಂಭಗೊಳ್ಳುವಂತಾಗಿದೆ.

Facebook Comments

Sri Raghav

Admin