‘SECURE’ ಪದಕ್ಕೆ ಹೊಸ ಅರ್ಥ ಕೊಟ್ಟ ಪ್ರಧಾನಿ ಮೋದಿ..!

ಈ ಸುದ್ದಿಯನ್ನು ಶೇರ್ ಮಾಡಿ

Modi-Secure--01

ಕ್ವಿಂಗ್‍ಡಾವೋ, ಜೂ.10-ನೆರೆಹೊರೆ ರಾಷ್ಟ್ರಗಳು ಹಾಗೂ ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ) ಪ್ರಾಂತ್ಯದೊಂದಿಗೆ ಸಹಕಾರ-ಸಂಪರ್ಕವು ಭಾರತದ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಸ್‍ಸಿಒ ಶೃಂಗಸಭೆಯಲ್ಲಿ ನಿರ್ಬಂಧಿತ ಅಧಿವೇಶನದಲ್ಲಿ ಮಾತನಾಡಿದ ಅವರು ಈ ಶೃಂಗದ ಯಶಸ್ವಿ ಫಲಶ್ರುತಿಗಾಗಿ ಸಂಪೂರ್ಣ ಸಹಕಾರ ನೀಡುವುದಾಗಿದೆ ತಿಳಿಸಿದ್ದಾರೆ.  ಇದೇ ಸಂದರ್ಭದಲ್ಲಿ ಮೋದಿ ಭದ್ರತೆ (SECURE) ಎಂಬ ಪದಕ್ಕೆ ತಮ್ಮದೇ ಶೈಲಿಯಲ್ಲಿ ಅರ್ಥೈಸಿದ್ದಾರೆ. ಎಸ್-ನಾಗರಿಕರ ಭದ್ರತೆ, ಇ-ಆರ್ಥಿಕ ಅಭಿವೃದ್ದಿ, ಸಿ-ಪ್ರಾದೇಶಿಕ ಸಂಪರ್ಕ, ಯು…ಏಕತೆ, ಆರ್-ಸೌರ್ವಭೌಮತ್ವ ಮತ್ತು ಸಮಗ್ರತೆಗೆ ಗೌರವ ಹಾಗೂ ಇ-ಪರಿಸರ ಸಂರಕ್ಷಣೆ-ಇದು ಮೋದಿ ಅವರ ವ್ಯಾಖ್ಯಾನವಾಗಿದೆ.

ಭೌಗೋಳಿಕಶಾಸ್ತ್ರದ ವ್ಯಾಖ್ಯಾನ ಪರಿವರ್ತನೆಗೆ ಕಾರಣವಾಗುವ ಭೌತಿಕ ಮತ್ತು ಡಿಜಿಟಲ್ ಸಂಪರ್ಕದ ಕಾಲದಲ್ಲಿ ನಾವೀಗ ಇದ್ದೇವೆ. ಆದ್ದರಿಂದ ನೆರೆಹೊರೆ ರಾಷ್ಟ್ರಗಳು ಹಾಗೂ ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ) ಪ್ರಾಂತ್ಯದೊಂದಿಗೆ ಸಹಕಾರ-ಸಂಪರ್ಕವು ಭಾರತದ ಆದ್ಯತೆಯಾಗಿದೆ ಎಂದು ಮೋದಿ ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin