ಸ್ಪೀಕರ್ ಎದುರು ಹಾಜರಾಗುವ ಶಾಸಕರಿಗೆ ಭದ್ರತೆ ನೀಡುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.11-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪೀಕರ್ ಎದುರು ಹಾಜರಾಗಲಿರುವ ಎಲ್ಲ ಶಾಸಕರಿಗೂ ಸೂಕ್ತ ಭದ್ರತೆ ನೀಡಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.

ಶಾಸಕರು ಮುಂಬೈನಿಂದ ಬಂದು ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ವಿಚಾರಣೆಗೆ ಹಾಜರಾಗುವವರೆಗೂ ಅವರಿಗೆ ಭದ್ರತೆ ನೀಡುವುದು ಡಿಜಿ ಅವರ ಜವಾಬ್ದಾರಿಯಾಗಿದೆ. ಯಾವುದೇ ರೀತಿಯ ಲೋಪವಾಗದಂತೆ ಎಚ್ಚರವಹಿಸಬೇಕೆಂದು ಆದೇಶ ಮಾಡಿದೆ.

ಶಾಸಕರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಭದ್ರತೆ ನೀಡುವಂತೆ ಸೂಚನೆ ಕೊಟ್ಟಿದೆ. ನಿನ್ನೆ ಚಿಕ್ಕಬಳ್ಳಾಪುರದ ಶಾಸಕ ಡಾ.ಕೆ.ಸುಧಾಕರ್ ರಾಜೀನಾಮೆ ನೀಡಲು ಮುಂದಾದ ವೇಳೆ ದೊಡ್ಡ ಹೈಡ್ರಾಮಾವೇ ನಡೆದಿತ್ತು.

ಅತೃಪ್ತ ಶಾಸಕರ ಪರ ವಾದ ಮಂಡಿಸಿರುವ ವಕೀಲ ಮುಕುಲ್ ರೋಹ್ಟಗಿ ಶಾಸಕರಿಗೆ ಸೂಕ್ತ ಭದ್ರತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ಕೊಡಬೇಕೆಂದು ಮನವಿ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು.

ಹೀಗಾಗಿ ಶಾಸಕರೆಲ್ಲರಿಗೂ ವಿಮಾನ ನಿಲ್ದಾಣದಿಂದ ವಿಧಾನಸೌಧವರೆಗೂ ಹಾಗೂ ವಿಚಾರಣೆ ವೇಳೆಯೂ ಭದ್ರತೆ ನೀಡಬೇಕೆಂದು ನಿರ್ದೇಶನ ನೀಡಲಾಗಿದೆ.

Facebook Comments

Sri Raghav

Admin