ಸೇತುವೆ ಸ್ಫೋಟಿಸಲು ಉಗ್ರರ ವಿಫಲ ಯತ್ನ, ತಪ್ಪಿದ ಭಾರೀ ವಿಧ್ವಂಸಕ ಕೃತ್ಯ..!
ಶ್ರೀನಗರ, ಆ.17-ಜಮ್ಮು ಮತ್ತು ಕಾಶ್ಮೀರ ಪುಲ್ವಾಮ ಜಿಲ್ಲೆಯಲ್ಲಿ ಸೇತುವೆಯೊಂದನ್ನು ಸ್ಫೋಟಿಸಿ ಭಾರೀ ವಿಧ್ವಂಸಕ ಕೃತ್ಯ ನಡೆಸುವ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳ ಕೃತ್ಯವನ್ನು ಭದ್ರತಾಪಡೆಗಳು ವಿಫಲಗೊಳಿಸಿವೆ.
ಪುಲ್ವಾಮ ಜಿಲ್ಲೆಯ ತುಜಾನ್ ಗ್ರಾಮದ ಬಳಿ ಸೇತುವೆಯ ಕೆಳಗೆ ಭಯೋತ್ಪಾದಕರುಅಡಗಿಸಿಟ್ಟಿದ್ದ ಸುಧಾರಿತ ಸ್ಪೋಟಕವನ್ನು(ಐಇಡಿ) ಭದ್ರತಾಪಡೆಗಳು ನಿನ್ನೆ ತಡರಾತ್ರಿ ಪತ್ತೆ ಮಾಡಿ, ಸಂಭವಿಸಬಹುದಾದ ಭೀಕರದುಷ್ಕøತ್ಯವನ್ನು ತಪ್ಪಿಸಿವೆ.
ಪುಲ್ಮಾಮಾ ಜಿಲ್ಲೆಯಲ್ಲಿ ಇತ್ತೀಚೆಗೆ ಉಗ್ರಗಾಮಿಗಳ ಉಪಟಳ ಹೆಚ್ಚಾಗುತ್ತಿದ್ದು, ಯೋಧರು, ಪೊಲೀಸರು, ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಪಂಚಾಯಿತಿ ಸದಸ್ಯರನ್ನುಗುರಿಯಾಗಿಟ್ಟುಕೊಂಡು ದಾಳಿಗಳನ್ನು ನಡೆಸುತ್ತಿದ್ದಾರೆ.
ತುಜಾನ್ ಮತ್ತುದಲ್ವಾನ್ ನಡುವೆ ಇರುವ ಪ್ರಮುಖ ಸೇತುವೆಯ ಅಡಿಯಲ್ಲಿ ಭಯೋತ್ಪಾದಕರು ಸೋಟಕ ಇರಿಸಿ ಸೇನಾ ಮತ್ತು ಸಾರ್ವಜನಿಕ ವಾಹನಗಳನ್ನು ಸೋಟಿಸಿ ಸಾವು-ನೋವಿಗೆ ಯತ್ನಿಸಿದ್ದರು.
ನಮ್ಮ ಭದ್ರತಾಪಡೆಗಳ ಸಕಾಲಿಕ ಸಮಯ ಪ್ರಜ್ಞೆಯಿಂದ ಸಂಭವಿಸ ಬಹುದಾಗ ದುಷ್ಕøತ್ಯ ತಪ್ಪಿದಂತಾಗಿದೆ ಎಂದು ಪೊಳೀಸ್ ಮಹಾ ನಿರೀಕ್ಷಕ (ಐಜಿಪಿ-ಕಾಶ್ಮೀರ) ವಿಜಯಕುಮಾರ್ ತಿಳಿಸಿದ್ದಾರೆ.
ಇದು ಬದ್ಗಾಂ ಜಿಲ್ಲೆಯೊಂದಿಗೆ ಪುಲ್ವಾಮಾಗೆ ಸಂಪರ್ಕ ಕಲ್ಪಿಉಸ ಪ್ರಮುಖ ಸೇತುವೆಯಾಗಿದ್ದು, ಸೇನಾ ವಾಹನಗಳು ಈ ಮಾರ್ಗದಲ್ಲೇ ಸಂಚರಿಸುತ್ತವೆ ಎಂದು ವಿಜಯ್ಕುಮಾರ್ ಹೇಳಿದ್ದಾರೆ.