ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ವ್ಯಾಪ್ತಿಗಳಲ್ಲಿ ಕೇಂದ್ರ ಪಡೆ ಗಸ್ತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.13- ಗಲಭೆ ಪೀಡಿತ ಪ್ರದೇಶಗಳಾದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಆರ್ ಎಎಫ್ ತುಕಡಿಗಳನ್ನು ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ.

ಗಲಭೆ ಹಿನ್ನೆಲೆಯಲ್ಲಿ ಐದು ಕಂಪೆನಿ ಕೇಂದ್ರಪಡೆಗಳು ಬೆಂಗಳೂರಿಗೆ ಆಗಮಿಸಿವೆ. ಸ್ಥಳೀಯ ಪೊಲೀಸರ ಜತೆಗೆ ಈ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ.

ಎರಡು ಕಂಪೆನಿ ಸಿಆರ್‍ಪಿಎಫ್, ಎರಡು ಕಂಪೆನಿ ಆರ್‍ಎಎಫ್, ಒಂದು ಕಂಪೆನಿ ಸಿಐಎಸ್‍ಎಫ್ ಆಗಮಿಸಿದ್ದು, ಇದರಲ್ಲಿ ಮೂರು ಕಂಪೆನಿಗಳನ್ನು ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ವ್ಯಾಪ್ತಿಗಳಲ್ಲಿ ನಿಯೋಜಿಸಲಾಗಿದೆ. ಉಳಿದ ಎರಡು ಕಂಪೆನಿಗಳನ್ನು ಉತ್ತರ ವಿಭಾಗ ಮತ್ತು ಪಶ್ಚಿಮ ವಿಭಾಗಗಳಿಗೆ ನೀಡಲಾಗಿದೆ.

Facebook Comments

Sri Raghav

Admin