ಲಡಾಖ್‍ನಲ್ಲಿ ಚೀನಾದ ಯಾವುದೇ ದುಸ್ಸಾಹಸ ಹಿಮ್ಮೆಟ್ಟಿಸಲು ಐಎಎಫ್ ಸಿದ್ಧ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.29- ಪೂರ್ವ ಲಡಾಖ್‍ನಲ್ಲಿ ಚೀನಾ ಸೇನಾ ಪಡೆಯ ಯಾವುದೇ ದುಸ್ಸಾಹಸವನ್ನು ಹಿಮ್ಮೆಟ್ಟಿಸಲು ಭಾರತೀಯ ವಾಯುಪಡೆ ಸರ್ವಸನ್ನದ್ಧವಾಗಿದೆ ಎಂದು ಐಎಎಫ್ ಮುಖ್ಯಸ್ಥ ಏರ್‍ಚೀಫ್ ಮಾರ್ಷಲ್ ರಾಕೇಶ್‍ಕುಮಾರ್ ಬದೌರಿಯಾ ಪುನರುಚ್ಚರಿಸಿದ್ದಾರೆ.

ಭವಿಷ್ಯದ ಯಾವುದೇ ಸಂಘರ್ಷ ಮತ್ತು ಯುದ್ಧಗಳು ನಡೆದರೂ ಭಾರತೀಯ ವಾಯುಪಡೆಯ ಸಹಕಾರದೊಂದಿಗೆ ಗೆಲುವು ನಮ್ಮದೇ ಎಂದು ಅವರು ದೃಢಪಡಿಸಿದ್ದಾರೆ.

ಪೂರ್ವ ಲಡಾಖ್‍ನಲ್ಲಿ ತಲೆದೋರಿರುವ ಚೀನಾದೊಂದಿಗೆ ಗಡಿ ಸಂಘರ್ಷ ಬಿಕ್ಕಟ್ಟು ಕುರಿತು ಪ್ರಸ್ತಾಪಿಸಿದ ಅವರು, ಉತ್ತರ ಗಡಿ ಪ್ರದೇಶಗಳಲ್ಲಿ ಪರಿಸ್ಥಿತಿ ಹಿಂದಿನಂತಿಲ್ಲ. ವಾತಾವರಣ ಬಿಗುವಿನಿಂದ ಕೂಡಿದೆ ಎಂದು ತಿಳಿಸಿದರು.

ಪೂರ್ವ ಲಡಾಖ್‍ನ ವಾಸ್ತವ ಗಡಿರೇಖೆ (ಎಲ್‍ಎಸಿ) ಬಳಿ ವೈರಿ ಸೇನೆಯ ಯಾವುದೇ ಆಕ್ರಮಣ ಅಥವಾ ದುಸ್ಸಾಹಸವನ್ನು ಎದುರಿಸಲು ನಮ್ಮ ಸೇನಾಪಡೆಗಳು ಅದರಲ್ಲಿಯೂ ಭಾರತೀಯ ವಾಯುಪಡೆ ಸಂಪೂರ್ಣ ಸನ್ನದ್ಧವಾಗಿದೆ ಎಂದು ಅವರು ಹೇಳಿದರು.

ಭಾರತೀಯ ವಾಯುಪಡೆ ಹಿಂದೆಂದಿಗಿಂತಲೂ ಅತ್ಯಂತ ಬಲಿಷ್ಠವಾಗಿದೆ. ಮುಂದೆ ಯಾವುದೇ ರೀತಿಯ ಸಂಘರ್ಷ ಮತ್ತು ಯುದ್ಧಗಳು ನಡೆದರೂ ಜಯ ಸಾಸುವಲ್ಲಿ ಐಐಎಫ್ ದೊಡ್ಡ ಮಟ್ಟದಲ್ಲಿ ಕಾರಣವಾಗಲಿದೆ ಎಂದು ಅವರು ಹೇಳಿದರು.

ಪೂರ್ವ ಲಡಾಖ್ ಭಾಗದಲ್ಲಿ ಚಿನುಕ್ ಅಪಾಚೆ ಮತ್ತು ಇತರ ಹೆಲಿಕಾಪ್ಟರ್‍ಗಳೊಂದಿಗೆ ರಫೇಲ್ ಫೈಟರ್ ಜೆಟ್‍ಗಳು ಹಾರಾಡುತ್ತಿದ್ದು, ಭಾರತೀಯ ಸೇನಾ ಸಾಮಥ್ರ್ಯಕ್ಕೆ ಪುಷ್ಟಿ ನೀಡಿವೆ. ಶತ್ರು ರಾಷ್ಟ್ರದ ಯಾವುದೇ ದುರಾಕ್ರಮಣ ಅಥವಾ ದುಸ್ಸಾಹಸ ಹಿಮ್ಮೆಟ್ಟಿಸಲು ನಾವು ಹಿಂಜರಿಯುವುದಿಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಕಮ್ಯುನಿಸ್ಟ್ ದೇಶಕ್ಕೆ ಎಚ್ಚರಿಕೆ ನೀಡಿದರು.

Facebook Comments

Sri Raghav

Admin