ರೈತರಿಗೆ ಕಳಪೆ ಬೀಜ, ರಸಗೊಬ್ಬರ ವಿತರಣೆಯಾಗದಂತೆ ಕ್ರಮ : ಬಿ.ಸಿ.ಪಾಟೀಲ್‌

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರೈತರಿಗೆ ಕಳಪೆ ಬೀಜ ರಸಗೊಬ್ಬರ ವಿತರಣೆಯಾಗದಂತೆ ಯಾರೂ ಸಹ ಇಂತಹ ಕುಕೃತ್ಯಕ್ಕೆ ಕೈ ಹಾಕದಂತೆ ಸ್ಟೇಟ್ ಅಗ್ರಿಕಲ್ಚರ್‌ ವಿಸಿಲೈನ್ಸ್ ಕಮಿಟಿ (ರಾಜ್ಯ ಕೃಷಿ ವಿಚಕ್ಷಣ ಸಮಿತಿ)ದಿಟ್ಟ ಕ್ರಮಕೈಗೊಂಡಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,ಗೊಬ್ಬರ ದಾಸ್ತಾನು ಇದ್ದರೂ ಕೆಲವೆಡೆ ನೋ ಸ್ಟಾಕ್ ಎಂಬ ಬೋರ್ಡ್ ಇರುವುದು ತಮ್ಮ ಗಮನಕ್ಕೆ ಬಂದಿದೆ. ಪರಿಸ್ಥಿತಿಯ ದುರ್ಲಾಭ ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡಿ ರೈತರನ್ನು ಶೋಷಣೆ ಮಾಡಿದ್ದು ಕಂಡುಬಂದರೆ ಅವರು‌ ಯಾರೇ ಆಗಲಿ ಅವರ ವಿರುದ್ಧ ಕ್ರಮಜರುಗಿಸದೇ ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಕೃಷಿ ವಿಚಕ್ಷಣ ಸಮಿತಿ ಈ ಬಗ್ಗೆ ನಿಗಾ ವಹಿಸಿ ಪ್ರಕರಣ ದಾಖಲು ಮಾಡಿಕೊಳ್ಳುತ್ತಿದೆ.ಇದಕ್ಕೆ ಆಯಾ ಭಾಗದ ಕೃಷಿ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರನ್ನು ಹೊಣೆ ಮಾಡಲಾಗುವುದು ಎಂದರು.

ಈತನಕ 375 ಕಡೆ ಸಮಿತಿ ದಾಳಿ ನಡೆಸಿದ್ದು, 170 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 6 ಕೋಟಿ ರೂ. ಮೌಲ್ಯದ ಕಳಪೆ‌ ಕೀಟ ನಾಶಕ ಮತ್ತು ರಾಸಾಯನಿಕಗಳನ್ನು ವಶಕ್ಕೆ ಪಡೆಯಲಾಗಿದೆ. ಇಂಥವರ ಲೈಸೆನ್ಸ್ ರದ್ದು ಮಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಕಷ್ಟಪಟ್ಟು ಬೆವರುಸುರಿಸಿ ರೈತ ಬಿತ್ತನೆ ಮಾಡಿ‌ ಬೆಳೆಬಾರದೇ ಇದ್ದರೆ ರೈತನ ಮನಸಿಗಾಗುವ ನೋವು ಹೇಳತೀರದು.ದೇಶಕ್ಕೆ ಅನ್ನಕೊಡುವ ರೈತನಿಗೆ ಯಾವುದೇ ಕಾರಣಕ್ಕೂ ನೋವಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ.ಹೀಗಾಗಿ ರೈತರಿಗೆ ಯಾವುದೇ ಕಾರಣಕ್ಕೂ ಕಳಪೆಬೀಜ  ಕಳಪೆ ರಸಗೊಬ್ಬರವನ್ನು ಯಾರೂ ವಿತರಿಸಬಾರದು.

ಈ ಬಗ್ಗೆ ಎಡಿ,ಜೆಡಿ್ಳು ಅಧಿಕಾರಿಗಳು ನಿಗಾವಹಿಸಬೇಕು.ದುವೇಳೆ ಇಂತಹದ್ದೇನಾದರೂ ಕಂಡುಬಂದರೆ ಅದಕ್ಕೆ ಎಡಿ,ಜೆಡಿಗಳು ಜವಾಬ್ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಬೆಂಗಳೂರು ಮತ್ತು ಸುತ್ತಮುತ್ತ ತರಕಾರಿ, ಹೂವು ಬೆಳೆದ ಬೆಳೆಗಾರರಿಗೆ ಸರಬರಾಜು ಮತ್ತು ಮಾರಾಟದಲ್ಲಿ ಸ್ವಲ್ಪ ತೊಂದರೆ, ವ್ಯತ್ಯಯವಾಗಿದೆ.

ಶೇ.40ರಷ್ಟು ಹೂವು, ತರಕಾರಿ ರೈತರಿಗೆ ನಷ್ಟವಾಗುತ್ತಿದೆ.ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು,‌ ನಷ್ಟ ಹೇಗೆ ಭರಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ‌ ನಡೆಸಲಾಗುವುದು ಎಂದರು‌. ಪಾಲಿ ಹೌಸ್ ಗೆ ಸರಬರಾಜು ಮಾಡುತ್ತಿರುವ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ರೈತರು ಬೇಡಿಕೆ ಇಟ್ಟಿದ್ದಾರೆಈ ಬಗ್ಗೆಯೂ ಸಹ ಗಂಭೀರವಾಗಿ ಚಿಂತನೆ ಮಾಡಿ ಮುಂದಿನ‌ ನಿರ್ಣಯ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ ಲಾಕ್ಡೌನ್ ನಿಂದ ಈವರೆಗೆ ಹೂಬೆಳೆದ ರೈತರಿಗೆ ಸುಮಾರು 250 ಕೋಟಿ ರೂ.ನಷ್ಟವಾಗಿದೆ. ರೈತರು ಬೆಳೆದ ಹೂ ಮಾರಲು ಸೂಕ್ತ ಮಾರುಕಟ್ಟೆಯ ಕೊರತೆ ಇದೆ. ಮಾರುಕಟ್ಟೆಗಳಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಇತ್ತೀಚಿನ‌ ಅಕಾಲಿಕ ಸುರಿದ ಮಳೆಯಿಂದ ರೈತರಿಗೆ ಆಗಿರುವ ನಷ್ಟದ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ನೀಡಲಾಗಿದೆ.ಈ ಬಗ್ಗೆ ಮುಖ್ಯಮಂತ್ರಿಗಳು‌ ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ.ಕೃಷಿ ಸಮಸ್ಯೆಗಳ ಪರಿಹಾರಕ್ಕಾಗಿ ಕೃಷಿಕರಿಗಾಗಿ 080-22212818,080-22210237 ಸಂಖ್ಯೆಯ ಎರಡು ಸಹಾಯವಾಣಿ ತೆರೆಯಲಾಗಿದ್ದು ರೈತರು ಇದರ‌ ಸದುಪಯೋಗಪಡಿಸಿಕೊಳ್ಳಬೇಕೆಂದು ಸಚಿವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಆನೇ‌ಕಲ್ ಶಾಸಕ ಕೃಷ್ಣಪ್ಪ,ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣಪ್ಪ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಿ. ಮರಿಸ್ವಾಮಿ, ಜಿಲ್ಲಾಧಿಕಾರಿ ಶಿವಸ್ವಾಮಿ‌ ಸೇರಿದಂತೆ‌‌ ಮತ್ತಿತರ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin