ಅಧಿನಿಯಮ ಉಲ್ಲಂಘಿಸಿ ಬೀಜ ಮಾರಾಟ ಮಾಡುತ್ತಿದ್ದ ಕಂಪೆನಿಯ ಪರವಾನಿಗೆ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಹಾವೇರಿ, ಏ.21:ಬೀಜ‌ ಅಧಿನಿಯಮ ಉಲ್ಲಂಘನೆ ಮಾಡಿದ್ದ ಕಾರಣಕ್ಕಾಗಿ ಬೀಜ ಮಾರಾಟ ಮಾಡುತ್ತಿದ್ದ ಖಾಸಗಿ ಕಂಪೆನಿಯ ಪರವಾನಿಗೆಯನ್ನು ಅಮಾನತು ಮಾಡಿ‌ ಆದೇಶಿಸಲಾಗಿದೆ.ರಾಣೆಬೆನ್ನೂರಿನ‌ “ವೆಂಕಟೇಶ್ವರ ಆಗ್ರೋ ಟ್ರೇಡರ್ಸ್” ಖಾಸಗಿ ಕಂಪೆನಿಯಾಗಿದ್ದು ಈ ಖಾಸಗಿ ಟ್ರೇಡರ್ಸ್ ಸುಮಾರು 12 ವರ್ಷ‌ಗಳಿಂದ ರೈತರ ಬೀಜ ಮಾರಾಟ ಮಾಡಿಕೊಂಡು ಬಂದಿರುತ್ತದೆ.

ಇತ್ತೀಚೆಗೆ ರಾಣೆಬೆನ್ನೂರಿನಲ್ಲಿ ಕಳಪೆ‌ ಬೀಜ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇಲೆ ಏಪ್ರಿಲ್ 20 ರಂದು ಈ ಟ್ರೆಡರ್ಸ್ ಮಳಿಗೆಗೆ ವಿಚಕ್ಷಣಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಹಾವೇರಿ ಜಿಲ್ಲಾ ಜಂಟಿ ಕೃಷಿ‌ ನಿರ್ದೇಶಕ ಬಿ.ಮಂಜುನಾಥ್ ಇವರ ನೇತೃತ್ವದ ವಿಚಕ್ಷಣಾ‌ ತಂಡ ಮಾರಾಟ ಕೇಂದ್ರಕ್ಕೆ ಭೇಟಿ ನೀಡಿದಾಗ ಸಂಶಯಾಸ್ಪದ ಬಿತ್ತನೆ‌ಬೀಜ ಪ್ಯಾಕಿಂಗ್ ಮಾಡುವ ಉಪಕರಣಗಳು ಲಭ್ಯವಾಗಿದ್ದವು.ಬಿಡಿ ಬಿತ್ತನೆ‌ ಬೀಜಗಳನ್ನು ಮಾರಾಟ ಮಾಡುವ ದುರುದ್ದೇಶದ ಅನುಮಾನ ಕಂಡುಬಂದಿದ್ದು ಇದು ಬೀಜ ಅಧಿನಿಯಮಗಳ ಉಲ್ಲಂಘನೆಯಾಗಿದೆ.

ಆದ್ದರಿಂದ ರಾಣೆಬೆನ್ನೂರಿನ “ವೆಂಕಟೇಶ್ವರ ಆಗ್ರೋ‌ ಟ್ರೇಡರ್ಸ್” ಪರವಾನಿಗೆಯನ್ನು ಅಮಾನತುಮಾಡಿ,‌ಸಮರ್ಪಕ ಉತ್ತರ ಸ್ಪಷ್ಟ ಕಾರಣ ನೀಡುವಂತೆ‌ ಷೋಕಾಸ್ ನೀಡಲಾಗಿದೆ.

Facebook Comments

Sri Raghav

Admin