‘ಸೀತಾರಾಮ ಕಲ್ಯಾಣ’ ಚಿತ್ರದ ಪ್ರೀಮಿಯರ್ ಶೋ ವೇಳೆ ಎಂಎಲ್ಎ – ಡಿಸಿಪಿ ನಡುವೆ ವಾಗ್ವಾದ..!

ಈ ಸುದ್ದಿಯನ್ನು ಶೇರ್ ಮಾಡಿ

Sinimaa--01

ಬೆಂಗಳೂರು, ಜ.25- ನಟ ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣದ ಪ್ರೀಮಿಯರ್ ಶೋ ಪಾರ್ಟಿ ನಂತರ ಜೆಡಿಎಸ್ ಶಾಸಕ ಹಾಗೂ ಡಿಸಿಪಿ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಸೀತಾರಾಮ ಕಲ್ಯಾಣ ಚಿತ್ರದ ಪ್ರೀಮಿಯರ್ ಶೋ ನಂತರ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್ ಹಾಗೂ ನಾಗಮಂಗಲ ಶಾಸಕ ಸುರೇಶ್‍ಗೌಡ ನಡುವೆ ಮಾತಿನ ಚಕಮಕಿ ನಡೆದು ಇಬ್ಬರೂ ಏರಿದ ಧ್ವನಿಯಲ್ಲಿ ವಾಕ್ಸಮರ ನಡೆಸಿದ್ದಾರೆ.

ಈ ಪ್ರೀಮಿಯರ್ ಶೋಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಣ್ಯವ್ಯಕ್ತಿಗಳಿಗೆ ಆಹ್ವಾನ ನೀಡಿದ್ದರು.  ಅದರಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ ಈಶ್ವರಪ್ಪ, ಸಚಿವ ಜಮೀರ್ ಅಹ್ಮದ್ ಸೇರಿದಂತೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಭಾಗವಹಿಸಿದ್ದರು.

ಇದಕ್ಕೆ ಡಿಸಿಪಿ ದೇವರಾಜ್ ಅವರನ್ನು ಚಿತ್ರತಂಡ ಭದ್ರತೆ ದೃಷ್ಟಿಯಿಂದ ಆಹ್ವಾನ ಮಾಡಿತ್ತು. ಔತಣಕೂಟ ಮುಗಿದ ನಂತರ ನಾಗಮಂಗಲ ಶಾಸಕ ಸುರೇಶ್‍ಗೌಡ ಮತ್ತು ದೇವರಾಜ್ ಒಂದೇ ಲಿಫ್ಟ್‍ನಲ್ಲಿ ಕೆಳಗೆ ಬರುತ್ತಿದ್ದರು.

ಈ ವೇಳೆ ಲಿಫ್ಟ್‍ನಲ್ಲಿ ಡಿಸಿಪಿ ದೇವರಾಜ್‍ರನ್ನು ಶಾಸಕ ಸುರೇಶ್‍ಗೌಡ ಗುರುಗುಟ್ಟು ನೋಡಿದ್ದೇ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಡಿಸಿಪಿ ದೇವರಾಜ್? ಏನ್ರಿ ನನ್ನನ್ನ ಹಾಗ್ ನೋಡ್ತಿದ್ದಿರಾ..? ಎಂದು ಸುರೇಶ್ ಗೌಡರನ್ನು ಪ್ರಶ್ನಿಸಿದ್ದಾರೆ.

ಅದಕ್ಕೆ ಸುರೇಶ್? ಗೌಡ, ನಾನ್ಯಾಕಯ್ಯ ನಿನ್ ನೋಡ್ಲಿ, ನೀ ಯಾರಿಗೇಳ್ತಿಯಾ ಎಂದು ನಂಗೊತ್ತು..? ಎಂದು ಸುರೇಶ್ ಗೌಡ ದೇವರಾಜ್‍ಗೆ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಡಿಸಿಪಿ, ನನ್ನ ಹತ್ತಿರ ಗುರಾಯಿಸೋದೆಲ್ಲ ಇಟ್ಕೊಳ್‍ಬೇಡ, ಸರಿ ಇರಲ್ಲ ಎಂದು ಸುರೇಶ್‍ಗೌಡರಿಗೆ ಲಿಫ್ಟ್‍ನಲ್ಲೇ ಎಚ್ಚರಿಕೆ ರೀತಿಯಲ್ಲಿ ಮಾತನಾಡಿರುವುದು ಶಾಸಕರನ್ನು ಕೆರಳುವಂತೆ ಮಾಡಿದೆ.

ಲಿಫ್ಟ್‍ನಿಂದ ಕೆಳಗೆ ಬಂದು ಇಳಿಯುತ್ತಿದ್ದಂತೆ ಡಿಸಿಪಿ ದೇವರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುರೇಶ್‍ಗೌಡ ಹಾಗೂ ಕೆಲ ಶಾಸಕರು ಮತ್ತೆ ಸಿಎಂ ಬಳಿ ತೆರಳಿದ್ದಾರೆ.

ಈ ವೇಳೆ ವಲ್ರ್ಡ್ ಟ್ರೇಡ್ ಸೆಂಟರ್‍ನ ಮೊದಲ ಮಹಡಿಯಲ್ಲಿದ್ದ ಹಿರಿಯ ನಾಯಕರ ಜತೆ ಮಾತುಕತೆಯಲ್ಲಿ ತೊಡಗಿದ್ದ ಸಿಎಂ ಡಿಸಿಪಿ ದೇವರಾಜ್‍ರನ್ನು ಕರೆದು ಏನಯ್ಯಾ ನಿಂದು, ಇಲ್ಲೂನೂ ರಗಳೆ ಅಂತಾ ಪ್ರಶ್ನಿಸಿದ್ದಾರೆ.

ಡಿಸಿಎಂ ಮಾತಿಗೆ ಪ್ರತ್ಯುತ್ತರ ನೀಡಲಾಗದೆ ಡಿಸಿಪಿ ದೇವರಾಜ್ ಸುಮ್ಮನೇ ನಿಂತಿದ್ದರಂತೆ. ನಂತರ ನಾನು ಬೆಳಗ್ಗೆ ಕರೆದು ಮಾತಾಡ್ತೀನಿ, ನಿನ್ ಬಿಡಪ್ಪ ಅಂತಾ ಸುರೇಶ್‍ಗೌಡರನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin