BREAKING : ‘ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್ ವಿಧಿವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು.ಮೇ. 14 : ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಹಾಗೂ ರಾಜಕೀಯ ವಿಶ್ಲೇಷಕ ಮಹದೇವ ಪ್ರಕಾಶ್ ಅವರು ಇಂದು ನಿಧನರಾಗಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ಇತ್ತೀಚಿಗೆ ಕರೋನ ವೈರಸ್ ತಗುಲಿತ್ತು. ತಕ್ಷಣ ಅವರನ್ನು ನಾರಾಯಣ ಹೃದಯಾಲಯದ ಆಸ್ಪತ್ರೆಗೆ ದಾಖಲು ಮಾಡಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ೫ ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕವಾಣಿ ಪತ್ರಿಕೆಯ ಮೂಲಕ ಪತ್ರಿಕಾ ಅವರು ಹಲವು ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿ ನಂತರ ಅವರ ಸಂಪಾದಕತ್ವದಲ್ಲಿ ‘ಈ ಭಾನುವಾರ’ ಸುದ್ದಿ ವಾರಪತ್ರಿಕೆಯನ್ನು ಹೊರತರುತ್ತಿದ್ದರು. ಅವರು ಕಳೆದ ಎರಡು ವರ್ಷದ ಹಿಂದೆ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅವರು ಇತ್ತೀಚೆಗೆ ಕಳೆದ ಆರು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು.

ಕರ್ನಾಟಕದ ಇತಿಹಾಸ ಹಾಗೂ ರಾಜಕೀಯದ ಬಗ್ಗೆ ಅಪಾರವಾದ ಜ್ಞಾನ ಹೊಂದಿದ್ದ ಪ್ರಕಾಶ್ ಅವರು ಹಲವಾರು ಮಾಧ್ಯಮಗಳಲ್ಲಿ ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದರು. ದಿನಪತ್ರಿಕೆಗಳಲ್ಲೂ ಕೂಡ ಅವರ ಅಂಕಣಗಳು ಪ್ರಕಟಗೊಳ್ಳುತ್ತಿದ್ದವು . ನೇರ ನಿಷ್ಠುರ ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು.

ಪ್ರಕಾಶ್ ಅವರು ಪತ್ರಕರ್ತರನ್ನು ತಿದ್ದಿ-ತೀಡಿ ಅವರಿಗೆ ಒಳ್ಳೆಯ ಹಾದಿ ತೋರುತ್ತಿದ್ದರು ಅವರು ಸೌಮ್ಯ ಸ್ವಭಾವದರಾದರೂ ಮಾತು ಮಾತ್ರ ತೀಕ್ಷ್ಣವಾಗಿತ್ತು. ಎಲ್ಲರೊಂದಿಗೂ ಬೆರೆತು ತಮ್ಮ ಅನುಭವಗಳನ್ನು ಹಂಚಿಕೊಂಡು ಬೆನ್ನು ತಟ್ಟುತ್ತಿದ್ದ ಮಹದೇವ ಪ್ರಕಾಶ್ ಅವರ ಅಕಾಲಿಕ ನಿಧನಕ್ಕೆ ರಾಜಕೀಯ ವಲಯ, ಪತ್ರಿಕಾ ಮಿತ್ರರು ಹಾಗೂ ಮಾಧ್ಯಮದ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ.

Facebook Comments

Sri Raghav

Admin