ಒಂದೇ ದಿನ ನಿವೃತ್ತಿಯಾಗಲಿದ್ದಾರೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನಾಟಕ ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲಿ ಇದೇ ಮೊದಲು ಬಹುಶಃ ಕೊನೆ ಇರಬಹುದು. ರಾಜ್ಯ ಪೊಲೀಸ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು ಒಂದೇ ದಿನ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಮೂವರಲ್ಲಿ ಇಬ್ಬರು ಅಧಿಕಾರಿಗಳು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿದ್ದವರು. ಒಬ್ಬರು ನಮ್ಮ ರಾಜ್ಯದ ಬೀದರ್ ಜಿಲ್ಲೆಯವರು.

ಈ ತಿಂಗಳ 31ರಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಾದ(ಡಿಜಿ ಮತ್ತು ಡಿಜಿಪಿ) ನೀಲಮಣಿ ಎನ್.ರಾಜು ಹಾಗೂ ಡಿಜಿಪಿಗಳಾದ ಎಂ.ಎನ್.ರೆಡ್ಡಿ ಮತ್ತು ರಾಘವೇಂದ್ರ .ಎಚ್ ಔರದ್ಕರ್ ಅವರುಗಳು ಪೊಲೀಸ್ ಸೇವೆಯಿಂದ ನಿರ್ಗಮಿಸಲಿದ್ದಾರೆ.

ಮೂಲತಃ ಉತ್ತರ ಪ್ರದೇಶದವರಾದ ನೀಲಮಣಿ ಎನ್.ರಾಜು ಅವರು ಆರಂಭದಲ್ಲಿ ಕೆಲವೇ ಕೆಲ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಉಳಿದಂತೆ ಕೇಂದ್ರ ಸೇವೆಯಲ್ಲಿಯೇ ಅತಿ ಹೆಚ್ಚು ಕಾರ್ಯ ನಿರ್ವಹಿಸಿದ್ದಾರೆ. 2017ರ ಅಕ್ಟೋಬರ್‍ನಲ್ಲಿ ರಾಜ್ಯ ಪೊಲೀಸ್‍ನ ಚುಕ್ಕಾಣಿ ಹಿಡಿದ ಅವರು ಈ ತಿಂಗಳ ಅಂತ್ಯದಲ್ಲಿ ನಿವೃತ್ತಿಯಾಗಲಿದ್ದಾರೆ. ಇವರ ಆಡಳಿತಾವಧಿಯಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ಯಾವುದೇ ಮಹತ್ವದ ಬದಲಾವಣೆಗಳಾಗಿಲ್ಲ. ಸಾರ್ವಜನಿಕರಿಗೆ ಸ್ಪಂದಿಸಲಿಲ್ಲ.

ನೆರೆಯ ರಾಜ್ಯ ಆಂಧ್ರಪ್ರದೇಶದವರಾದ ಎಂ.ಎನ್.ರೆಡ್ಡಿ ಅವರು ಅಗ್ನಿ ಶಾಮಕ ದಳ ಮತ್ತು ಗೃಹ ರಕ್ಷಕ ದಳದ ಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚನ್ನಪಟ್ಟಣ ಉಪವಿಭಾಗದಲ್ಲಿ ತಮ್ಮ ಸೇವೆಯನ್ನು ಆರಂಭಿಸಿದ ರೆಡ್ಡಿ ಅವರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಬೆಂಗಳೂರು ನಗರ ಪೆÇಲೀಸ್ ಘಟಕದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಕೊನೆಗೆ ಆಯುಕ್ತರಾಗಿ ಆಡಳಿತ ನಡೆಸಿದರು.
ಅತಿ ಹೆಚ್ಚಾಗಿ ಬೆಂಗಳೂರು ನಗರದ ಸಂಚಾರ ವಿಭಾಗದಲ್ಲಿ ಸೇವೆ ಸಲ್ಲಿಸಿರುವ ರೆಡ್ಡಿ ಅವರು ಸಂಚಾರ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆಗಳನ್ನು ತಂದಿದ್ದಾರೆ.

ಶಿಸ್ತಿನ ಅಧಿಕಾರಿಯಾಗಿರುವ ಇವರು ಅಧಿಕಾರ ಹಾಗೂ ಕರ್ತವ್ಯದಲ್ಲಿ ಸದಾ ಶಿಸ್ತುಬದ್ಧರಾಗಿದ್ದರು. ಎಂ.ಎನ್.ರೆಡ್ಡಿ ಅವರು ಇದೇ ತಿಂಗಳ 31ರಂದು ಸೇವೆಯಿಂದ ನಿರ್ಗಮಿಸಲಿದ್ದಾರೆ. ಬೀದರ್ ಜಿಲ್ಲೆಯವರಾದ ರಾಘವೇಂದ್ರ.ಎಚ್ ಔರದ್ಕರ್ ಅವರು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿರ್ಮಾಣ ನಿಗಮ ನಿಯಮಿತ ಮತ್ತು ಮೂಲಭೂತ ಸೌಕರ್ಯ ಘಟಕದ ಸಿಎಂಡಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿವಿಧ ಜಿಲ್ಲೆಗಳಲ್ಲಿ ಹಾಗೂ ವಲಯಗಳಲ್ಲಿ ಸೇವೆ ಸಲ್ಲಿಸಿರುವ ಇವರು ಮಂಡ್ಯ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅಲ್ಲಿ ಕೆಲವು ಸುಧಾರಣೆಗಳನ್ನು ತಂದ ಕೀರ್ತಿ ಇವರಿಗೆ ಸಲ್ಲುತ್ತದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಇವರು ನೇಮಕಾತಿ ವಿಭಾಗದಲ್ಲಿ ಎಡಿಜಿಪಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಪೊಲೀಸರ ವೇತನ ಮತ್ತು ಭತ್ಯೆ ಪರಿಷ್ಕರಣೆಯ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಇವರನ್ನು ನೇಮಕ ಮಾಡಲಾಗಿತ್ತು. ಅದರಂತೆ ಅವರು ವರದಿ ನೀಡಿದ್ದಾರೆ. ಇವರು ಸಹ ಇದೇ ತಿಂಗಳ 31ರಂದು ಪೊಲೀಸ್ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

Facebook Comments

Sri Raghav

Admin