ಕೊರೋನಾ ವೈರಸ್ ಎಫೆಕ್ಟ್, ಮುಂಬೈ ಷೇರುಪೇಟೆ ತಲ್ಲಣ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮಾ.6- ಕೊರೋನಾ ವೈರಸ್ ಭೀತಿಯಿಂದ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರುತ್ತಿರುವ ನಡುವೆ ಈಗ ಭಾರತದ ಮುಂಬೈ ಷೇರುಪೇಟೆಯಲ್ಲೂ ಭಾರೀ ನಷ್ಟ ಉಂಟಾಗುತ್ತಿದೆ.

ನಿಪ್ಟಿ ಮತ್ತು ಬಿಎಸ್‍ಇ ಸೆನ್ಸಕ್ಸ್ ಇಂದು ಬೆಳಗ್ಗೆ ಮಾರುಕಟ್ಟೆ ಆರಂಭಗೊಳ್ಳುತ್ತಿದ್ದಂತೆ ಷೇರುದಾರರು ತಮ್ಮ ಷೇರುಗಳ ಮಾರಾಟ ಮಾಡುವ ಪೈಪೋಟಿಗೆ ಬಿದ್ದಂತೆ ಕಂಡು ಬಂದಿದೆ.

ಇದರಿಂದಾಗಿ 1400 ಅಂಕ ಕುಸಿದಿದ್ದು, ಭಾರೀ ಕಂಪೆನಿಗಳು ಕೊರೋನಾ ಹೊಡೆತಕ್ಕೆ ದಂಗಾಗಿವೆ. ಇಷ್ಟೊಂದು ವೇಗದಲ್ಲಿ ಷೇರುಗಳ ಮಾರಾಟ ಮಾಡುವುದು ನಿಯಮ ಬಾಹೀರವಾದುದ್ದು, ಇದೇ ವೇಳೆ ವಿದೇಶಿ ಹೂಡಿಕೆಯು ಕುಸಿಯುತ್ತಿದೆ.

ಷೇರುಪೇಟೆ ಕುಸಿತದ ನಡುವೆ ಡಾಲರ್ ಎದುರು ರೂಪಾಯಿ 53 ಪೈಸೆ ಕುಸಿದಿದೆ. ಪ್ರತಿ ಡಾಲರ್ 73.86ಗೆ ತಲುಪಿದೆ.ಯಸ್ ಬ್ಯಾಂಕ್  ಷೇರು ಮೌಲ್ಯದ ಪಾತಳಕ್ಕೆ ಕುಸಿದಿದೆ. ಹೂಡಿಕೆದಾರರಿಗೆ ಭಾರೀ ನಷ್ಟವಾಗಿದೆ.

Facebook Comments