ಸರೀನಾ ವಿಲಿಯಮ್ಸ್ ಗೆ 10 ಸಾವಿರ ಡಾಲರ್ ದಂಡ..!

ಈ ಸುದ್ದಿಯನ್ನು ಶೇರ್ ಮಾಡಿ

ಇಂಗ್ಲೆಂಡ್, ಜು. 9 – ಟೆನ್ನಿಸ್ ಲೋಕದ ಅಗ್ರ ಕ್ರಮಾಂಕದ ಆಟಗಾರ್ತಿ ಸರೀನಾ ವಿಲಿಯಮ್ಸ್‍ಗೆ ಅಲ್ ಇಂಗ್ಲೆಂಡ್ ಕ್ಲಬ್ 10 ಸಾವಿರ ಡಾಲರ್ ದಂಡವನ್ನು ವಿದಿಸಿದೆ.

ತಮ್ಮ ಡ್ರೆಸ್ ಬಗ್ಗೆ ಟೀಕೆ ಮಾಡಿದ ಕೋರ್ಟ್ ಅಂಪೈರ್ ವಿರುದ್ಧ ಹರಿಹಾಯ್ದು ಭಾರೀ ಟೀಕೆಗೆ ಗುರಿಯಾಗಿದ್ದ ಸರೀನಾ ವಿಲಿಯಮ್ಸ್ ಮತ್ತೊಮ್ಮೆ ವಿವಾದಕ್ಕೆ ಇಡಾಗಿದ್ದು ಅಲ್ ಇಂಗ್ಲೆಂಡ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸರೀನಾ ರಾಕೆಟ್‍ನಿಂದ ಟೆನ್ನಿಸ್ ಕೋರ್ಟ್ ಅನ್ನು ಹಾನಿಗೊಳಿಸಿದ್ದರಿಂದ ಅವರಿಗೆ 10 ಸಾವಿರ ಡಾಲರ್ ದಂಡವನ್ನು ವಿದಿಸಲಾಗಿದೆ.

ಸರೀನಾ ಇಂದು ಕ್ವಾಟರ್‍ಪೈನಲ್ ಪಂದ್ಯದಲ್ಲಿ ಅಮೆರಿಕಾದ ಅಲೆಸೋನ್ ರಿಸ್ಕೆ ವಿರುದ್ಧ ಸೆಣಸಾಡುತ್ತಿದ್ದು ತಮ್ಮ 24ನೆ ಗ್ರಾಂಡ್ ಸ್ಲಾಮ್ ಗೆಲ್ಲುವ ಮುಂಚೂಣಿಯಲ್ಲಿದ್ದಾರೆ.

ಪಾಬಿಯೋ ಪೋಗ್‍ನಿನಿ ಟೂರ್ನಿಯ ಮೂರನೇ ಸುತ್ತಿನಲ್ಲಿ ಟೆನ್ನೈಸ್ ಸ್ಯಾಂಡೆಗ್ರೀನ್ ವಿರುದ್ಧ ಸೋತ ನಂತರ ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿ ನಡೆದುಕೊಂಡ ಪಾಬಿಯೋಗೂ 3 ಸಾವಿರ ಡಾಲರ್ ಹಾಗೂ ನಿಕ್ಕಿ ಕೈರ್‍ಗಿರೋಗೆ 8 ಸಾವಿರ ಡಾಲರ್ ದಂಡವನ್ನು ವಿದಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin