ಹಾಸನದಲ್ಲಿ ನಿಲ್ಲದ ಸರಣಿ ಕೊಲೆ, ಮತ್ತೆರಡು ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ,ಸೆ.4- ಜಿಲ್ಲೆಯಲ್ಲಿ ಕಳೆದೆರಡು ದಿನಗಳಲ್ಲಿ ಮೂವರ ಕೊಲೆ ನಡೆದಿದ್ದು, ರಾತ್ರಿ ನಗರ ಹೊರವಲಯಹಾಗೂ ಎಪಿಎಂಸಿ ಈರುಳ್ಳಿ ಮಂಡಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವುದು ಇನ್ನಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ನಿನ್ನೆ ಅಗಿಲೆ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದರೆ, ಅರಕಲಗೂಡಿನ ರಸ್ತೆಬದಿ ಮತ್ತೊಂದು ಶವ ಕಂಡುಬಂದಿತ್ತು.

ಇದರ ಬೆನ್ನಲ್ಲೇ ನಿನ್ನೆ ಸಂಜೆ 5 ಗಂಟೆ ಸುಮಾರಿನಲ್ಲಿ ನಗರದ ಹೊರವಲಯದ ಬಿಟ್ಟಗೌಡನಹಳ್ಳಿಯ ಎಚ್‍ಪಿ ಪೆಟ್ರೋಲ್ ಬಂಕ್ ಹಿಂಭಾಗ ಹಳೆ ಬಾವಿಯಲ್ಲಿ ಶವ ತೇಳುತ್ತಿದ್ದುದು ಕಂಡು ತಕ್ಷಣ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಬಾವಿಯಿಂದ ಶವ ಹೊರತೆಗೆದು ಮೃತರ ಗುರುತು ಪತ್ತೆಹಚ್ಚುತ್ತಿದ್ದಾರೆ. ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಕೊಲೆ ಮಾಡಿ ಬಾವಿಗೆ ಎಸೆದಿದ್ದಾರೆಯೇ ಎಂಬುದು ನಿಗೂಢವಾಗಿದೆ.

ಈ ನಡುವೆ ಎಪಿಎಂಸಿ ಬಳಿಯ ಈರುಳ್ಳಿ ಮಂಡಿಯಲ್ಲಿ ತಡರಾತ್ರಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಕಳೆದೆರಡು ತಿಂಗಳಲ್ಲಿ ಚನ್ನರಾಯಪಟ್ಟಣ, ಹಾಸನ ಬೇಲೂರಿನಲ್ಲಿ 13 ಕೊಲೆಗಳು ನಡೆದಿದ್ದು, ಮೊನ್ನೆ ಅರಕಲಗೂಡು ತಾಲ್ಲೂಕಿನಲ್ಲಿ ರಸ್ತೆಬದಿ ಶವ ಪತ್ತೆಯಾಗಿತ್ತು.

Facebook Comments