ಕೊರೊನಾ ಲಸಿಕೆ ಹಂಚಿಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ
ಈ ಸುದ್ದಿಯನ್ನು ಶೇರ್ ಮಾಡಿ
ನವದೆಹಲಿ. ಜ. 11.ಕೊರೊನಾ ಲಸಿಕೆ ಹಂಚಿಕೆ ಪ್ರಕ್ರಿಯೆಗೆ ಇಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ. ಪೂನಾದಲ್ಲಿರುವ ಸೆರೆನಾ ಕೋವಿ ಷೀಲ್ಡ್ ಲಸಿಕೆಯನ್ನ ಖರೀದಿಸಲು ಕೇಂದ್ರ ಸರ್ಕಾರ ಇಂದು ಒಪ್ಪಂದ ಮಾಡಿಕೊಂಡಿದೆ. 1. 1ಕೋಟಿ ಲಸಿಕೆಯನ್ನು ಖರೀದಿಸಿ ಅದನ್ನು ಪೂನಾದಿಂದ ದೇಶದ ವಿವಿಧೆಡೆಗೆ ಸಾಗಣೆ ಮಾಡಲು ಇಂದು ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಜನವರಿ 16 ರಿಂದ ದೇಶದ ವಿವಿಧೆಡೆ ಇದನ್ನ ವಿತರಣೆ ಮಾಡಲಾಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸಿ ವ್ಯವಸ್ಥಿತವಾಗಿ ಇದರ ಪೂರೈಕೆ ಮಾಡಲು ಕೈಗೊಳ್ಳಬೇಕಾದ ಕಾರ್ಯಸೂಚಿಯನ್ನು ತಿಳಿಸಿದ್ದಾರೆ
Facebook Comments