ಅಧಿವೇಶನಕ್ಕೆ ಸಚಿವಾಲಯ ಸಿಬ್ಬಂದಿ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.11- ಸಮ್ಮಿಶ್ರ ಸರ್ಕಾರದ ಅತೃಪ್ತ ಶಾಸಕರು ರಾಜೀನಾಮೆ ನೀಡಿ ಸಂಕಷ್ಟ ಎದುರಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ವಿಧಾನಸೌಧ ಸಚಿವಾಲಯ ಸಿಬ್ಬಂದಿ ಯಾವುದೇ ಗೋಜಿಲ್ಲದೆ ವಿಧಾನಮಂಡಲ ಅಧಿವೇಶನದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಅಧಿವೇಶನಕ್ಕೆ ಅಗತ್ಯವಿರುವ ಸಭಾಂಗಣ, ಜನನಾಯಕರು ಬಳಸುವ ಮೈಕ್, ಬೆಲ್ ಮತ್ತಿತರ ಪರಿಕರಗಳು ಸುಸ್ಥಿತಿಯಲ್ಲಿವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಲ್ಲದೆ, ಸಭಾಂಗಣ, ಬಾಗಿಲು, ಮೆಟ್ಟಿಲುಗಳ ಸ್ವಚ್ಛತೆಗೂ ಮುಂದಾಗಿದ್ದಾರೆ.

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆ ಯಿಂದಾಗಿ ಎಲ್ಲೆಡೆ ಆತಂಕದ ವಾತಾವರಣ ಮೂಡಿದ್ದರೂ ಸಿಬ್ಬಂದಿ ಮಾತ್ರ ಅಧಿವೇಶನಕ್ಕೆ ಅಗತ್ಯವಿರುವ ಸಿದ್ಧತೆಯನ್ನು ಕೈಗೊಳ್ಳುವ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ