ವೇತನ ಕೇಳಿದ್ದಕ್ಕೆ ನಾಯಿ ಛೂಬಿಟ್ಟ ಓನರ್, ಯುವತಿಗೆ 15 ಹೊಲಿಗೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.8- ಬಾಕಿ ವೇತನ ಕೇಳಿದ್ದಕ್ಕೆ ಯುವತಿ ಮೇಲೆ ಪಾರ್ಲರ್ ಮಾಲೀಕಿ ಸಾಕುನಾಯಿಯನ್ನು ಛೂಬಿಟ್ಟು ಗಾಯಗೊಳಿಸಿರುವ ಘಟನೆ ದಕ್ಷಿಣ ದೆಹಲಿಯ ಮಾಲ್ವಿಯನಗರದಲ್ಲಿ ನಡೆದಿದೆ.  ಸ್ವಪ್ನ ಎಂಬಾಕೆ ಬ್ಯೂಟಿಪಾರ್ಲರ್‍ವೊಂದರಲ್ಲಿ ಕೆಲಸ ಮಾಡಿದ್ದು, ಲಾಕ್‍ಡೌನ್ ವೇಳೆ ಕೆಲಸ ತೊರೆದಿದ್ದರು.

ಬ್ಯೂಟಿಪಾರ್ಲರ್ ಮಾಲೀಕಿ ಬಾಕಿ ಹಣವನ್ನು ನೀಡುವಂತೆ ಕೇಳಿದ್ದಾಗ ಕೊಡಲು ನಿರಾಕರಿಸಿದ್ದರು. ಮತ್ತೊಮ್ಮೆ ಕೇಳಿದಾಗ ಕೊಡುವುದಾಗಿ ಮನೆಗೆ ಕರೆಸಿಕೊಂಡರು. ಹಣ ಸಿಗಬಹುದೆಂದು ಅವರ ಮನೆಗೆ ಹೋದರೆ ಸ್ವಲ್ಪ ಕೆಲಸ ಮಾಡು ಹಣ ಕೊಡುವೆ ಎಂದು ಸತಾಯಿಸಿದ್ದಾರೆ.

ಕೆಲಸ ಮಾಡಲು ನಿರಾಕರಿಸಿದಾಗ ಪಾರ್ಲರ್ ಮಾಲೀಕಿ ನೌಕರಳ ಮೇಲೆ ತಮ್ಮ ಸಾಕುನಾಯಿಯನ್ನು ಛೂ ಬಿಟ್ಟು ಕಚ್ಚಿಸಿದ್ದಾಳೆ. ಇದರಿಂದ ಗಾಯಗೊಂಡಿರುವ ಯುವತಿಗೆ 15 ಕಡೆ ಸ್ಟಿಚಿಂಗ್ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿರುವ ಯುವತಿಯನ್ನು ಮದನ್ ಮೋಹನ್ ಮಾಳವಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಸಪ್ತರ್‍ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Facebook Comments