ಸೇವಾಸಿಂಧುನಿಂದ ಚಾಲಕರ ಅರ್ಜಿ ಕಾಲಂ ತೆಗೆದ ಸರ್ಕಾರ, ಪ್ರತಿಭಟನೆಗೆ ಸಜ್ಜಾದ ಚಾಲಕರ ಒಕ್ಕೂಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಅವೈಜ್ಞಾನಿಕ ಲಾಕ್ ಡೌನ್ ಜಾರಿ ಮಾಡಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ಬರೆ ಎಳೆದಿತ್ತು. ಈ ಸಂದರ್ಭದಲ್ಲಿ ಸೇವಾ ಸಿಂಧು ಮೂಲಕ ಚಾಲಕರಿಗೆ 5 ಸಾವಿರ ರೂ. ಹಣವನ್ನು ನೀಡಿತ್ತು. ಸೇವಾಸಿಂಧು ಆಪ್‍ನ ಮೂಲಕ ಒಟ್ಟು 2 ಲಕ್ಷ 37 ಸಾವಿರದ 313 ಅರ್ಜಿಗಳು ಸಲ್ಲಿಕೆಯಾಗಿದ್ದವು.

ಇವುಗಳಲ್ಲಿ ತಿರಸ್ಕøತಗೊಂಡ ಅರ್ಜಿಗಳ ಸಂಖ್ಯೆಯ 937. ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಕೆಯಾದರೂ ಹಣ ಬಿಡುಗಡೆ ಮಾಡದೆ ಸರ್ಕಾರ ಚಾಲಕ ವಿರೋಧಿ ಧೋಋಣೆ ಎಸಗುತ್ತಿದೆ ಎಂದು ಇಂಡಿಯನ್ ವೆಹಿಕಲ್ಸ್ ಡ್ರೈವರ್ಸ್ ಟ್ರೇಡ್ ಯೂನಿಯನ್‍ನ ಅಧ್ಯಕ್ಷ ಗಂಡಸಿ ಸದಾನಂದ್ ಅವರು ತಿಳಿಸಿದರು.

ರಾಜ್ಯದಲ್ಲಿ 2.34 ಲಕ್ಷ ಆಟೋಚಾಲಕರು, 4.33ಲಕ್ಷ ಟ್ಯಾಕ್ಸಿ ಚಾಲಕರಿದ್ದಾರೆ. ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ ಐದು ಸಾವಿರ ರೂ ಪರಿಹಾರ ನೀಡುವುದಾಗಿ ಘೋಷಿಸಿ 3 ತಿಂಗಳು ಕಳೆದಿವೆ.

ಚಾಲಕರಿಗೆ ಛಾರ್ಸಿ ನಂಬರ್, ಆಧಾರ್, ಪ್ಯಾನ್ ಎಂದು ಕಾಲಹರಣ ಮಾಡುವ ಮೂಲಕ ಹಲವು ದಿನ ಚಾಲಕರನ್ನು ಸರ್ಕಾರ ಗೊಂದಲದಲ್ಲಿ ಸಿಲುಕಿಸಿತ್ತು. ಇವರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ.

ಈ ಮುಂಚೆಯೇ ರಾಜ್ಯ ಸರ್ಕಾರ ಸೇವಾಸಿಂಧು ಆಪ್‍ನ ಮೂಲಕ ಚಾಲಕರು ಅರ್ಜಿಸಲ್ಲಿಸುವ ಕಾಲಂನ್ನು ಅಳಿಸುವ ಮೂಲಕ ಚಾಲಕರಿಗೆ ದ್ರೋಹ ಬಗೆದಿದೆ.

ಒಟ್ಟು 387 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಬೇಕಾಗಿತ್ತು. ಕೇವಲ 60 ಕೋಟಿ ಹಣವನ್ನು ಬಿಡುಗಡೆ ಮಾಡಿ ಚಾಲಕರ ಸಮುದಾಯಕ್ಕೆ ಬಹುದೊಡ್ಡ ಅನ್ಯಾಯವೆಸಗಿದೆ.

ಸರ್ಕಾರದ ಈ ಕ್ರಮವನ್ನು ಸದಾನಂದ್ ಅವರು ತೀವ್ರವಾಗಿ ಖಂಡಿಸಿದ್ದು ಕೂಡಲೇ ಸರ್ಕಾರ ಎಲ್ಲಾ ಸೇವಾಸಿಂಧೂ ಮೂಲಕ ಅರ್ಜಿಸಲ್ಲಿಸಿರುವ ಚಾಲಕರಿಗೆ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಉಗ್ರ ಪ್ರತಿಭಟನೆ ಮಾಡವುದಾಗಿ ಎಚ್ಚರಿಕೆ ನೀಡಿದರು.

ಇಷ್ಟೆಲ್ಲಾ ಆದರೂ ಸಹ ಇತ್ತೀಚೆಗಷ್ಠೇ ಸರ್ಕಾರ ಒಂದು ವಾರ ಲಾಕ್‍ಡಾನ್ ಮಾಡಿ ಮತ್ತೆ ಚಾಲಕರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಎಂಬಂತೆ ಮಾಡಿತ್ತು. ಅದರ ಜೊತೆಗೆ ಕ್ಯಾಬ್ ಚಾಲಕರಿಗೆ ಟ್ರಿಪ್‍ಗಳು ಸಿಗದೆ ಸುಮಾರು 2 ದಿನವಾದರೂ 500 ರೂ ಹಣವನ್ನು ದುಡಿಯಲು ಸಾಧ್ಯವಾಗದ ಪರಿಸ್ಥಿತಿಯಿದೆ.

ಎಷ್ಟೋ ಚಾಲಕರು ಬೆಂಗಳೂರು ನಗರವನ್ನು ತೊರೆದು ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಖಂಡನೀಯ.

ಕೂಡಲೇ ಚಾಲರಿಗೆ ಅರ್ಜಿಸಲ್ಲಿಸಲು ಅವಕಾಶ ಮಾಡಿಕೊಡಿ ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿರುವ ಚಾಲಕರಿಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

Facebook Comments

Sri Raghav

Admin