ಕೊರೋನಾದಿಂದ ಕಂಗೆಟ್ಟ ಅಮೆರಿಕನ್ನರ ಜೀವ ಉಳಿಸುತ್ತಿದೆ ಭಾರತದ ಮಾತ್ರೆ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಮೇ 2-ವಿಶ್ವದಲ್ಲೇ ಸೂಪರ್ ಹೈ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಖ್ಯಾತ ಆರೋಗ್ಯ ರಕ್ಷಣಾ ಸಿಬ್ಬಂದಿಯನ್ನು ಹೊಂದಿರುವ ಅಮೆರಿಕ ಈಗ ಅಗೋಚರ ವೈರಸ್ ದಾಳಿಯಿಂದ ಕಂಗೆಟ್ಟು ಅಸಹಾಯಕವಾಗಿದೆ.

ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಜೀವನ್ಮರಣ ಹೋರಾಟ ನಡೆಸುತ್ತಿರುವ ಸಹಸ್ರಾರು ರೋಗಿಗಳಿಗೆ ಭಾರತದ ಮಲೇರಿಯಾ ಪ್ರತಿರೋಧಕ ಔಷಧವಾದ ಹೈಡ್ರಾಕ್ಸಿಕ್ಲೋರೊಕ್ವಿನ್(ಎಚ್‍ಸಿಕ್ಯೂ) ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಔಷಧಿ ರೋಗಿಗಳ ಚಿಕಿತ್ಸೆಗೆ ತುಂಬಾ ಸಹಕಾರಿಯಾಗಿದೆ ಎಂಬುದು ದೃಢಪಟ್ಟಿದೆ.

ಇದು ರೋಗಿಗಳ ರಕ್ಷಣೆಯಲ್ಲಿ ಒಂದು ರೀತಿಯ ವರದಾನವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ವಾರವಷ್ಟೇ ಎಚ್‍ಸಿಕ್ಯೂ ಔಷಧಿ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ ಎಂದು ಹೇಳಿಕೆ ನೀ(ಡಿದ್ದ ಅಮೆರಿಕಕ್ಕೆ ಈಗ ಭಾರತದ ಈ ಮಲೇರಿಯಾ ನಿರೋಧಕ ಬಹು ಮುಖ್ಯ ಮತ್ತು ಚಿಕಿತ್ಸೆಗೆ ಮುಂಚೂಣಿಯಲ್ಲಿರುವ ಸಿದ್ಧೌಷಧವಾಗಿದೆ.

ವಾಷಿಂಗ್ಟನ್, ನ್ಯೂಯಾಕ್ ಸೇರಿದಂತೆ ಅಮೆರಿಕ ಬಹುತೇಕ ನಗರಗಳಲ್ಲಿ ಆಸ್ಪತ್ರೆಗಳು ಈಗ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಮೊದಲ ಆಯ್ಕೆಯನ್ನಾಗಿ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧಿಯನ್ನು ಬಳಸುತ್ತಿರುವುದು ಇಲ್ಲಿ ಗಮನಾರ್ಹ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿ ಮೇರೆಗೆ ಭಾರತವು ಅಮೆರಿಕಕ್ಕೆ ಎಚ್‍ಸಿಕ್ಯೂ ಮತ್ತು ಇತರ ವೈರಸ್ ಪ್ರತಿರೋಧಕ ಔಷಧಿಗಳ ಮೇಲಿನ ರಫ್ತು ನಿರ್ಬಂಧವನ್ನು ತೆರವುಗೊಳಿಸಿ ರಫ್ತು ಮಾಡಿತ್ತು.

# ಸಾವಿನ ಸಂಖ್ಯೆ 65,435:
ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ಅಮೆರಿಕದಲ್ಲಿ ಈವರೆಗೆ ಮೃತರ ಸಂಖ್ಯೆ 65,435ಕ್ಕೇರಿದೆ. ಸೋಂಕಿತರ ಸಂಖ್ಯೆ 13.50 ಲಕ್ಷ ದಾಟಿದ್ದು, ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನೊಂದು ನಾಲ್ಕೈದು ದಿನಗಳಲ್ಲಿ ಅಮೆರಿಕದಲ್ಲಿ ಮರಣ ಪ್ರಮಾಣ ಒಂದು ಕೋಟಿ ತಲುಪುವ ಭಾರೀ ಆತಂಕವಿದೆ.

ಜಾನ್ಸ್ ಹಾಪ್‍ಕಿನ್ಸ್ ಯೂನಿವರ್ಸಿಟಿ ಮಾಹಿತಿ ಪ್ರಕಾರ 24 ತಾಸುಗಳಲ್ಲಿ 1,883 ಮಂದಿ ಅಸುನೀಗಿದ್ದಾರೆ. ನಿನ್ನೆ ಒಂದೇ ದಿನ ಅಮೆರಿಕದಲ್ಲಿ 29,515 ಜನರಿಗೆ ಸೋಂಕು ದೃಢಪಟ್ಟಿದೆ. ಮೊನ್ನೆ 27,327 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು.

ಇಂದು ಮತ್ತೆ ಅಮೆರಿಕದ ವಿವಿಧ ರಾಜ್ಯಗಳು ಮತ್ತು ಪ್ರಮುಖ ನಗರಗಳಲ್ಲಿ ಕೊರೊನಾ ಸಾವು ಮತ್ತು ಸೋಂಕು ಪ್ರಕರಣಗಳ ಸರಣಿ ಯಥಾಪ್ರಕಾರ ಮುಂದುವರಿದಿದೆ.  ಅಮೆರಿಕದಲ್ಲಿ ಸುಮಾರು ಒಂದು ಲಕ್ಷ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Facebook Comments

Sri Raghav

Admin