ಸಿಡಿ ತನಿಖೆ : ಗೃಹ ಸಚಿವರಿಂದ ಸಿಎಂಗೆ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.13- ಸಿ.ಡಿ ಪ್ರಕರಣ ಕುರಿತಾಗಿ ಎಸ್‍ಐಟಿ ಕೊಂಡಿರುವ ತನಿಖಾ ಕ್ರಮಗಳ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದರು. ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಬೊಮ್ಮಾಯಿ, ನಿನ್ನೆಯಿಂದ ಎಸ್‍ಐಟಿ ತೆಗೆದುಕೊಂಡಿರುವ ಕ್ರಮಗಳ ಸಂಪೂರ್ಣ ವಿವರವನ್ನು ಅವರ ಗಮನಕ್ಕೆ ತಂದಿದ್ದಾರೆ.

ನಿನ್ನೆ ಎಸ್‍ಐಟಿಯು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಡಿಸಿತ್ತು. ಇಂದು ಕೂಡ ಕೆಲವು ಕಡೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಈ ಎಲ್ಲಾ ಮಾಹಿತಿಗಳ ಬಗ್ಗೆಯೂ ಬೊಮ್ಮಾಯಿ ಸಿಎಂ ಅವರಿಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಕರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ? ಅವರ ಹಿನ್ನೆಲೆ? ಯಾರ್ಯಾರ ಸಂಪರ್ಕದಲ್ಲಿದ್ದರು? ಸಿ.ಡಿ ಎಲ್ಲಿ ತಯಾರಿಸಲಾಗಿತ್ತು? ಇದನ್ನು ಸೋರಿಕೆ ಮಾಡಿದವರು? ಇದರ ಹಿಂದಿರುವ ಶಕ್ತಿಗಳು ಎಲ್ಲದರ ಬಗ್ಗೆಯೂ ಮಾಹಿತಿಯನ್ನು ಕೊಟ್ಟಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಎಸ್‍ಐಟಿ ಕೈಗೊಂಡಿರುವ ಕ್ರಮಗಳು, ಯುವತಿಯ ಪತ್ತೆ ಸೇರಿದಂತೆ ಇಂಚಿಂಚು ಮಾಹಿತಿಯನ್ನು ಬಿಎಸ್‍ವೈಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Facebook Comments