ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ವಿದ್ಯಾರ್ಥಿನಿಯರಿಗೆ ಪೀಡಿಸುತ್ತಿದ್ದ ಶಿಕ್ಷಕ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Student-Girl-Rape

ಔರಂಗಾಬಾದ್, ಜ.16-ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಬಾಲಕಿಯರಿಗೆ ಪೀಡಿಸಿ, ರಾತ್ರಿ ವೇಳೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸರ್ಕಾರಿ ಅನುದಾನಿತ ವಸತಿಶಾಲೆಯ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.  ಬೀಡ್ ಜಿಲ್ಲೆಯ ಶಿರೂರ್ ತಾಲ್ಲೂಕಿನ ವಸತಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಈ ಸಂಬಂಧ ಲೆಕ್ ಲಡಕಿ ಅಭಿಯಾನ್ ಎಂಬ ಸಲಹಾ ಸಂಸ್ಥೆಗೆ ನೀಡಿದ ದೂರಿನಿಂದಾಗಿ ಕಾಮುಕ ಶಿಕ್ಷಣ ವಿಕೃತ ವಾಂಛೆ ಬಯಲಾಯಿತು.

ವಸತಿಶಾಲೆಯ ಹೆಣ್ಣು ಮಕ್ಕಳೆಲ್ಲ ತನ್ನ ಮುಂದೆ ಸ್ನಾನ ಮಾಡಬೇಕು ಮತ್ತು ರಾತ್ರಿ ತನ್ನೊಂದಿಗೆ ಇದ್ದು ತಾನು ಮಾಡುವ ಲೈಂಗಿಕ ಚೇಷ್ಟೆಗಳಿಗೆ ಸಹಕಾರ ನೀಡಬೇಕು ಎಂಬ ಅಲಿಖಿತ ನಿಯಮ ಜಾರಿಗೊಳಿಸಿದ್ದನೆಂದು ಹೇಳಲಾಗಿದೆ.  ಕಳೆದ ಐದು ತಿಂಗಳಿನಿಂದಲೂ ಈ ಕೃತ್ಯ ಎಸಗುತ್ತಿದ್ದ ಈತನ ವರ್ತನೆಯಿಂದ ಬಾಲಕಿಯರು ರೋಸಿ ಹೋಗಿದ್ದರು. ಈ ವಿಷಯವನ್ನು ವಿದ್ಯಾರ್ಥಿನಿಯೊಬ್ಬಳು ತನ್ನ ಪೋಷಕರ ಗಮನಕ್ಕೆ ತಂದಿದ್ದಳು. ಪೋಷಕರು ಆಕೆಯನ್ನು ಶಾಲೆಯಿಂದ ಬಿಡಿಸಿ ಆಕೆ ಅಪ್ತಾಪ್ರಳಾಗಿದ್ದರೂ ವಿವಾಹ ಮಾಡಿದ್ದರು.  ಮತ್ತೊಬ್ಬ ಬಾಲಕಿ ನೀಡಿದ ದೂರನ್ನು ಆಧರಿಸಿ ಶಿಕ್ಷಕನ್ನು ಪೊಲೀಸರು ಬಂಧಿಸಿ ಪೋಕ್ಸೊ ಕಾಯ್ದೆ ಮತ್ತು ಲೈಂಗಿಕ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಸಲಿಕೊಂಡು ತನಿಖೆ ಮುಂದುವರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin