ಚಿಕಾಗೋದಲ್ಲಿ ಭಾರತೀಯ ವಿದ್ಯಾರ್ಥಿನಿಯ ರೇಪ್ ಮಾಡಿ, ಉಸಿರುಗಟ್ಟಿಸಿ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ನ.26-ಅಮೆರಿಕದ ಚಿಕಾಗೋದಲ್ಲಿ 19 ವರ್ಷದ ಭಾರತೀಯ ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಯೊಬ್ಬ ಅತ್ಯಾಚಾರ ಎಸಗಿ ಉಸಿರುಗಟ್ಟಿಸಿ ಕೊಂದಿರುವ ಘಟನೆ ನಡೆದಿದೆ. ಈ ಭೀಕರ ಕೃತ್ಯದಿಂದ ಅಮೆರಿಕಾದಲ್ಲಿರುವ ಭಾರತೀಯ ಸಮುದಾಯ ದಿಗ್ಭ್ರಮೆಗೊಂಡಿದೆ.

ಅತ್ಯಾಚಾರ ಮತ್ತು ಕೊಲೆಯಾದ ರುಥ್ ಜಾರ್ಜ್ ಹೈದರಾಬಾದ್ ಮೂಲದವರಾಗಿದ್ದು, ಇಲಿನೋಯ್ಸ್ ವಿಶ್ವವಿದ್ಯಾಲಯದ ಹಾನರ್ಸ್ ವಿದ್ಯಾರ್ಥಿಯಾಗಿದ್ದರು. ಕಾಲೇಜು ಕ್ಯಾಂಪಸ್‍ನ ಗ್ಯಾರೇಜಿನಲ್ಲಿ ತಮ್ಮ ಕುಟುಂಬದ ಕಾರಿನ ಹಿಂಭಾಗದಲ್ಲಿ ರುಥ್ ಅವರ ಮೃತದೇಹ ಪತ್ತೆಯಾಗಿದೆ.

ರುಥ್ ಜಾರ್ಜ್ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಉಸಿರುಗಟ್ಟಿಸಿ ಕೊಂದಿರುವುದು ದೃಢಪಟ್ಟಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿನಿ ಮೇಲೆ ಲೈಂಗಿಕ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಕೊಂದ ಆರೋಪದ ಮೇಲೆ ಡೊನಾಲ್ಡ್ ಥ್ರುಮ್ಯಾನ್(26) ಎಂಬಾತನನ್ನು ಕೃತ ನಡೆದ ಕೆಲವೇ ತಾಸುಗಳಲ್ಲಿ ಚಿಕಾಗೋ ಮೆಟ್ರೋ ಸ್ಟೇಷನ್‍ನಲ್ಲಿ ಬಂಧಿಸಲಾಯಿತು. ಈತ ಯೂನಿವರ್ಸಿಟಿ ವಿದ್ಯಾರ್ಥಿ ಅಲ್ಲ. ಈತನ ವಿರುದ್ಧ ರೇಪ್ ಮತ್ತು ಮರ್ಡರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Facebook Comments