ಶಾದಿ ಡಾಟ್ಕಾಂ ಮೂಲಕ ಹಲವು ಮಹಿಳೆಯರಿಗೆ ವಂಚಿಸಿ ಸಿಕ್ಕಿಬಿದ್ದ ಖದೀಮ
ಬೆಂಗಳೂರು : ಶಾದಿ ಡಾಟ್ ಕಾಂನಲ್ಲಿ ಪರಿಚಯಿಸಿಕೊಂಡು ಮದುವೆಯಾಗುವ ಭರವಸೆ ನೀಡಿ ಹಲವಾರು ಮಂದಿ ಮಹಿಳೆಯನ್ನು ಆನ್ಲೈನ್ನಲ್ಲಿ ವಂಚಿಸಿರುವ ಸುಕ್ಷಿತ ಖದೀಮನನ್ನು ವೈಟ್ಫಿಲ್ಡ್ ಪೋಲಿಸರು ಬಂಧಿಸಿದ್ದಾರೆ. ಮಧ್ಯ ಪ್ರದೇಶ ಮೂಲದ ಬೆಂಗಳೂರಿನಲ್ಲಿ ಕೆಲಸ ಮಾಡುವ ಶ್ರೀಮತಿ ವಿದುಶಿ ಎಂಬ ಮಹಿಳೆ ವೈಟ್ಫೀಲ್ಡ್ ವಿಭಾಗದ ಸಿಇಎಸ್ ಪೋಲೀಸ್ ಠಾಣೆಗೆ ದೂರು ನೀಡಿ ಶಾದಿ ಡಾಟ್ ಕಾಂನಲ್ಲಿ ಸ್ವೈನ್ರಾಜ್ ಕಿಶೋರ್ ಎಂಬ ಐಡಿಯಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ನನಗೆ 24.50 ಲಕ್ಷ ರೂ. (27 ಸಾವಿರ ಅಮೆರಿಕನ್ ಡಾಲರ್)ವಂಚಿಸಿದ್ದಾನೆ ಎಂದು ಆರೋಪಿಸಿದ್ದರು.
ಮೂಲತಃ ನೈಜೀರಿಯಾದವರಾದ ಬ್ರೈಟ್ ಎಂಬಾತ ರಾಜ್ ಕಿಶೋರ್ ಹೆಸರಿನಲ್ಲಿ ಸ್ಕೈಪ್ನಲ್ಲಿ ಕಾಲ್ ಮಾಡಿ, ವಾಟ್ಸ್ಅಪ್ನಲ್ಲೂ ಚಾಟ್ ಮಾಡುತ್ತಿದ್ದರು. ಎಲ್ಲದಕ್ಕೂ ವಿದೇಶದಲ್ಲಿ ನೋಂದಣಿಯಾದ ಮೊಬೈಲ್ ನಂಬರ್ನ್ನೇ ಬಳಕೆ ಮಾಡುತ್ತಿದ್ದನು ಎಂದು ತಿಳಿಸಿದ್ದಾರೆ. ತನ್ನನ್ನು ತಾನು ಸಿವಿಲ್ ಇಂಜಿನಿಯರ್ ಎಂದು ಪರಿಚಯಿಸಿಕೊಂಡಿದ್ದ ಆರೋಪಿ, ಕನ್ಸ್ಟ್ರಕ್ಷನ್ ಕೆಲಸ ನಿಮ್ಮಿತ್ತ ಮಲೇಷಿಯಾಗೆ ಹೋಗುತ್ತಿದ್ದೇನೆ.
ನಿಮಗೆ ಗಿಫ್ಟ್ ಕಳುಹಿಸುತ್ತೇನೆ ಎಂದು ನವೆಂಬರ್ 2ರಂದು ಹೇಳಿದ್ದಾನೆ. ಕನ್ಸ್ಟ್ರಕ್ಷನ್ ವಸ್ತುಗಳಿಗೆ 27 ಸಾವಿರ ಡಾಲರ್ ಪಾವತಿಸಬೇಕಿದೆ. ಆ ಹಣವನ್ನು ಸ್ಕಾಟ್ಲ್ಯಾಂಡ್ನಲ್ಲಿರುವ ತನ್ನ ಬ್ಯಾಂಕ್ ಖಾತೆಯಿಂದ ಪಾವತಿಸುತ್ತೇನೆ ಎಂದು ಅ.3ರಂದು ಹೇಳಿದ್ದಾನೆ. ಭದ್ರತೆಯ ಕಾರಣಕ್ಕಾಗಿ ನನ್ನ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ ಎಂದು ಹೇಳಿ ನಂಬಿಸಿದ್ದಾನೆ. ತಕ್ಷಣಕ್ಕೆ ಅಗತ್ಯವಾಗಿರುವ 24.50 ಲಕ್ಷ ರೂಪಾಯಿಗಳನ್ನು ಆನ್ಲೈನ್ನಲ್ಲಿ ಪಾವತಿಸುವಂತೆ ಮನವಿ ಮಾಡಿದ್ದಾನೆ. ಆತನ ಮಾತು ನಂಬಿ ಆನ್ಸಿ ವಿ ವಿ ಎಂಬುವವರ ಐಸಿಐಸಿಐ ಬ್ಯಾಂಕ್ ಖಾತೆಗೆ ವಿದುಶಿ ಹಣ ಹಾಕಿದ್ದಾರೆ. ಆದರೆ ನಂತರ ನನಗೆ ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಪೆÇಲೀಸ್ ಇನ್ಸ್ಪೆಕ್ಟರ್ ಗುರುಪ್ರಸಾದ್ ಜಿ, ಸಬ್ ಇನ್ಸ್ಪೆಕ್ಟರ್ ನಾಗೇಶ್ ಜಿ.ಎನ್. ಅವರು ತಂಡ ರಚನೆ ಮಾಡಿ ತನಿಖೆ ಕೈಗೆತ್ತಿಕೊಂಡಾಗ ಆರೋಪಿ ಸ್ವೈನ್ ರಾಜ್ ಕಿಶೋರ್ ದೆಹಲಿಯಲ್ಲಿ ಇರುವುದಾಗಿ ಮಾಹಿತಿ ಸಿಕ್ಕಿದೆ. ನವೆಂಬರ್ 23ರಂದು ದೆಹಲಿಗೆ ತೆರಳಿದ ಪೋಲೀಸರ ತಂಡ ದೆಹಲಿಯ ಉತ್ತಮನಗರದ ವಿಪಿನ್ ಗಾರ್ಡನ್ ಎಕ್ಸ್ಟೆನ್ಸ್ನ್ನಲ್ಲಿದ್ದ ಬ್ರೈಟ್ ಅಲಿಯಾಸ್ ಸ್ವೈನ್ ರಾಜ್ಕಿಶೋರ್ (25) ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಈತನ ಸಹಚರರಾದ ಎಮ್ಯಾನುಲ್, ಜಾನ್ ಎಲೆಕ್ಸ್, ಬ್ರೈಟ್ನ ಪತ್ನಿ ದೇವೈನ್ ಮಧುಕಶಿ. ಎಜಿಜು ಮಧುಕೇಶಿ, ಮಾರಿಯಾ ಎಮ್ಯಾನುಲ್ ರನ್ನು ಆರೋಪಿಗಳೆಂದು ಗುರುತಿಸಿದ್ದಾರೆ. ತಲೆ ಮರೆಸಿಕೊಂಡಿರುವವರ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಎಲ್ಲಾ ಆರೋಪಿಗಳು ನೈಜೀರಿಯಾ ಮೂಲದವರಾಗಿದ್ದು, ದೆಹಲಿಯಲ್ಲೇ ಕುಳಿತು ವಿದೇಶಿ ಪೋನ್ ನಂಬರ್ಗಳನ್ನು ಬಳಕೆ ಮಾಡಿ ಮಹಿಳೆಯನ್ನು ವಂಚಿಸುತ್ತಿದ್ದರೆಂದು ಪೋಲೀಸರು ತಿಳಿಸಿದ್ದಾರೆ. ಈವರೆಗೂ 10 ಪ್ರಕರಣಗಳು ಪತ್ತೆಯಾಗಿವೆ. ಕೋಟ್ಯಂತರ ರೂಪಾಯಿ ವಂಚನೆಯಾಗಿರುವ ಮಾಹಿತಿ
ಇದೆ.