ಹುರಿಯತ್ ಕಾನ್ಫೆರೆನ್ಸ್ ಗೆ ಗಿಲಾನಿ ಗುಡ್‍ಬೈ..!

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ,ಜೂ.29- ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಹಿರಿಯ ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಅಲಿ ಷಾ ಗಿಲಾನಿ ಹುರಿಯತ್ ಕಾನ್ಫರೆನ್ಸ್‍ನಿಂದ ಹೊರಬಂದಿದ್ದಾರೆ.

ಹುರಿಯತ್ ಕಾನ್ಫರೆನ್ಸ್ ವೇದಿಕೆಯಲ್ಲಿ ಇತ್ತೀಚೆಗೆ ಕಂಡುಬಂದಿರುವ ಬೆಳವಣಿಗೆ, ಭಿನ್ನಾಭಿಪ್ರಾಯಗಳು ಮತ್ತು ಕೆಲವು ಅಹಿತಕರ ಚಟುವಟಿಕೆಗಳಿಂದ ಬೇಸತ್ತು ತಾವು ಈ ಸಂಘಟನೆಯಿಂದ ಹೊರಬಂದಿರುವುದಾಗಿ ಪತ್ರ ಮತ್ತು ಆಡಿಯೋ ಮೂಲಕ ತಿಳಿಸಿದ್ದಾರೆ.

90 ವರ್ಷದ ಗಿಲಾನಿ 2003ರಲ್ಲಿ ಹುರಿಯತ್ ಕಾನ್ಫರೆನ್ಸ್ ವೇದಿಕೆಯನ್ನು ಸ್ಥಾಪಿಸಿದ್ದರು. ಈ ಪ್ರತ್ಯೇಕವಾದಿ ಸಂಘಟನೆಯ ಸಂಸ್ಥಾಪಕರಾದ ಇವರು ಅಜೀವ ಅಧ್ಯಕ್ಷರಾಗಿ ಮುಂದುವರೆದಿದ್ದರು.

ಈಗ ಈ ಸಂಘಟನೆಯಿಂದ ಗಿಲಾನಿ ಹೊರಬಂದಿರುವುದು ಹುರಿಯತ ಕಾನ್ಫರೆನ್ಸ್‍ಗೆ ಭಾರೀ ಆಘಾತ ನೀಡಿದೆ. ಪ್ರತ್ಯೇಕತಾ ವಾದಿಗಳನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿರುವ ಸಂದರ್ಭದಲ್ಲೇ ಕಂಡುಬಂದಿರುವ ಈ ಬೆಳವಣಿಗೆ ಕಾಶ್ಮೀರದಲ್ಲಿ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಿರುವವರಿಗೆ ಮತ್ತೊಂದು ಹೊಡೆತವಾಗಿದೆ.

Facebook Comments