ಶಾರೂಖ್ ಸಿನಿ ಪಯಣಕ್ಕೆ 29 ವರ್ಷ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜೂ.25-ಸೂಪರ್ ಸ್ಟಾರ್ ಶಾರೂಖ್ ಖಾನ್ ಬಾಲಿವುಡ್‍ಗೆ ಎಂಟ್ರಿ ಪಡೆದು ಭರ್ತಿ 29 ವರ್ಷ ತುಂಬಿದೆ. ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಉಳಿದುಕೊಳ್ಳಲು ಕಾರಣರಾದ ಅಭಿಮಾನಿಗಳಿಗೆ ಖಾನ್ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಟಿವಿ ಧಾರಾವಾಹಿ ಫೌಜಿ ಮತ್ತು ಸರ್ಕಸ್ ಸಿರಿಯಲ್‍ಗಳಲ್ಲಿ ನಟಿಸುತ್ತಿದ್ದ ಖಾನ್ ಅವರು 1992ರಲ್ಲಿ ದೀವಾನಾ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಪಡೆದಿದ್ದರು.

ನಂತರ ಅವರು ಢರ್, ಭಾಜಿಘರ್, ರಾಜು ಬನ್‍ಗಯಾ ಜಂಟಲ್‍ಮನ್, ಕುಚ್ ಕುಚ್ ಹೋತಾ ಹೈನಂತಹ ಸೂಪರ್ ಡೂಪರ್ ಚಿತ್ರಗಳಲ್ಲಿ ನಟಿಸಿ ಬಾಲಿವುಡ್‍ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ತಮ್ಮ ಸಿನಿಮಾ ಜೀವನದಲ್ಲಿ ನನ್ನ ಸಿನಿಮಾಗಳನ್ನು ನೋಡುತ್ತಾ, ಪ್ರೋತ್ಸಾಹಿಸುತ್ತ ಬಂದಿರುವ ಅಭಿಮಾನಿಗಳೇ ನನ್ನ ಈ ಯಶಸ್ಸಿಗೆ ಕಾರಣ ಎಂದು ಅವರು ಟ್ವಿಟ್ ಮಾಡಿ ಶುಭಾಷಯ ಸಲ್ಲಿಸಿದ್ದಾರೆ.

55 ವರ್ಷ ವಯಸ್ಸಿನಲ್ಲಿ ಸತತ 29 ವರ್ಷಗಳ ಕಾಲ ಚಿತ್ರರಂಗದಲ್ಲಿ ಕಳೆದಿದ್ದೇನೆ. ಉಳಿದ ನನ್ನ ಜೀವಿತಾವಧಿಯಲ್ಲೂ ಕೈಲಾದಷ್ಟು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ಖುಷಿ ಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ. 2018 ರಲ್ಲಿ ಜೀರೋ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದ ಶಾರೂಖ್ ಖಾನ್ ಅವರು ಮುಂದಿನ ಪಠಾಣ್ ಚಿತ್ರದ ಶೂಟಿಂಗ್‍ನಲ್ಲಿ ಭಾಗವಹಿಸುತ್ತಿದ್ದಾರೆ.

ಇದರ ಜತೆಗೆ ಸಿನಿಮಾ ತಯಾರಕ ರಾಜ್‍ಕುಮಾರ್ ಇರಾನಿ ಹಾಗೂ ದಕ್ಷಿಣದ ಖ್ಯಾತ ನಿರ್ದೇಶಕ ಅತ್ಲೇ ಅವರ ಚಿತ್ರಗಳಲ್ಲೂ ನಟಿಸುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.

Facebook Comments