ಶಾರೂಕ್ ಖಾನ್ ಮ್ಯಾನೇಜರ್ NCB ಕಚೇರಿಗೆ ಬಂದಿದ್ದೇಕೆ..?!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಅ.23-ಬಾಲಿವುಡ್ ನಟ ಶಾರೂಕ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರು ಎನ್‍ಸಿಬಿ ಕಚೇರಿಗೆ ಭೇಟಿ ನೀಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಕೈಯಲ್ಲಿ ಎನ್‍ವಲಪ್ ಹಿಡಿದು ಬಂದ ಪೂಜಾ ಅವರು ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೆಟ್‍ನಲ್ಲಿರುವ ಎನ್‍ಸಿಬಿ ಕಚೇರಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ.

ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಎನ್‍ಸಿಬಿ ಅಕಾರಿಗಳೊಂದಿಗೆ ಮಾತುಕತೆ ನಡೆಸಿದ ಅವರು ಕಚೇರಿಯಿಂದ ತೆರಳುವಾಗ ಎದುರಾದ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿರುವುದು ಅಚ್ಚರಿ ಮೂಡಿಸಿದೆ.

ಶಾರೂಕ್ ಖಾನ್ ಪುತ್ರ ಆರ್ಯನ್ ಅವರನ್ನು ಡ್ರಗ್ಸ್ ಸೇವನೆ ಆರೋಪದಲ್ಲಿ ಬಂಸಿದ್ದ ಬೆನ್ನಲ್ಲೆ ಎನ್‍ಸಿಬಿ ಅಕಾರಿಗಳು ಶಾರೂಕ್ ಅವರ ಮನೆ ಮೇಲೆ ರೇಡ್ ಕೆಲವು ದಾಖಲೆಗಳಿಗಾಗಿ ತಡಕಾಡಿದ್ದರು.

ನಿನ್ನೆ ಶಾರೂಕ್ ಖಾನ್ ಅವರ ಅಂಗರಕ್ಷಕ ಎನ್‍ಸಿಬಿ ಕಚೇರಿಗೆ ಭೇಟಿ ನೀಡಿ ಅಕಾರಿಗಳಿಗೆ ಕೆಲವು ದಾಖಲೆಗಳನ್ನುನೀಡಿದ್ದರು.ಇದೀಗ ಮತ್ತೆ ಶಾರೂಖ್ ಅವರ ಮ್ಯಾನೇಜರ್ ಎನ್‍ಸಿಬಿ ಕಚೇರಿಗೆ ಭೇಟಿ ನೀಡಿ ಎನ್‍ವೆಲಪ್‍ನಲ್ಲಿ ಕೆಲವು ದಾಖಲೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin