ಸ್ಯಾಂಡಲ್ವುಡ್ ನಿರ್ದೇಶಕ ಶಾಹುರಾಜ್ ಶಿಂಧೆ ನಿಧನ
ಬೆಂಗಳೂರು, ನ.19- ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ಶಾಹುರಾಜ್ಶಿಂಧೆ ಅವರು ಇಂದು ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ. 2007ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಆದಿತ್ಯ ಅಭಿನಯದ ಸ್ನೇಹನಾ ಪ್ರೀತಿನಾ ಚಿತ್ರವನ್ನು ನಿರ್ದೇಶಿಸಿದ್ದ ಶಾಹುರಾಜ್ಶಿಂಧೆ ನಂತರ ದರ್ಶನ್ ಅಭಿನಯದ ಅರ್ಜುನ್, ಪ್ರೇಮ ಚಂದ್ರಮ ಎಂಬ ಸಿನಿಮಾ ನಿರ್ದೇಶಿಸಿದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು.
ಒಂಭತ್ತು ವರ್ಷಗಳ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳಲು ಮುಂದಾದ ಶಾಹುರಾಜ್ಶಿಂಧೆ, ಅಶಿಕಾರಂಗನಾಥ್ ಅಭಿನಯದ ರಂಗಮಂದಿರ ಚಿತ್ರವನ್ನು ನಿರ್ದೇಶಿಸುತ್ತಿದ್ದರು ಚಿತ್ರ ಬಿಡುಗಡೆಗೂ ಮುನ್ನವೇ ಅವರು ಸಾವನ್ನಪ್ಪಿರುವುದು ಚಿತ್ರತಂಡಕ್ಕೆ ದುಃಖ ಉಂಟುಮಾಡಿದೆ.
ಶಾಹುರಾಜ್ ಶಿಂಧೆ ಅವರು ಉತ್ತಮ ನಿರ್ದೇಶಕರಾಗಿದ್ದರು ಅವರ ಸಾವಿನಿಂದ ಚಿತ್ರರಂಗಕ್ಕೆ ನಷ್ಟ ಉಂಟಾಗಿದೆ ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿ ಕುಟುಂಬಕ್ಕೆ ಭಗವಂತನು ನೀಡಲಿ ಎಂದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಟ್ವಿಟ್ ಮಾಡಿ ಸಂತಾಪ ಸೂಚಿಸಿದ್ದಾರೆ,.
ಶಾಹುರಾಜ್ ಶಿಂಧೆ ನಿಧನಕ್ಕೆ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಜಯರಾಜ್, ಪದಾಧಿಕಾರಿಗಳು, ನಟ ದರ್ಶನ್ ಸೇರಿದಂತೆ ಹಲವು ಸಂತಾಪ ವ್ಯಕ್ತಪಡಿಸಿದ್ದಾರೆ.