ಸರ್ಕಾರ ಪತನ ಆಗಲ್ಲ -ಶಾಮನೂರು

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಏ.23- ರಮೇಶ್ ಜಾರಕಿ ಹೊಳಿ ಬಿಜೆಪಿಗೆ ಹೋಗುವುದಾದರೆ ಹೋಗಲಿ ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂದಿದ್ದರೂ ರಮೇಶ್ ಜಾರಕಿ ಹೊಳಿ ಬಿಜೆಪಿ ಹೋಗೋ ಗಿರಾಕಿನೇ ಎಂದರು.

ಅವರು ಬಿಜೆಪಿಗೆ ಹೋಗುವುದರಿಂದ ಮೈತ್ರಿ ಸರ್ಕಾರ ಏನು ಪತನವಾಗುವುದಿಲ್ಲ. ಪಕ್ಷ ಬಿಡ್ತೀನಿ, ಬಿಡ್ತೀನಿ ಅಂತ ಹೇಳ್ತಾನೇ ಇದಾರೆ, ಇನ್ನು ಪಕ್ಷ ತೊರ್‍ದಿಲ್ಲ. ಹೋಗೋದಿದ್ರೆ ಹೋಗ್ಲಿ…ಬಿಜೆಪಿಯವರು ಮೈತ್ರಿ ಸರ್ಕಾರ ಪತನವಾಗುತ್ತೆ ಎಂದು ಹೇಳ್ತಾನೆ ಬಂದಿದ್ದಾರೆ, ಅವರ್ ಹೇಳಿದ್ದೊಂದೂ ಆಗುವುದಿಲ್ಲ ಎಂದರು.

ರಮೇಶ್ ಜಾರಕಿ ಹೊಳಿ ಅಡ್ವಾನ್ಸ್ ತಗೊಂಡಿದ್ದಾರೆ ಅದಕ್ಕೆ ರಾಜೀನಾಮೆ ಕೊಡ್ತೀನಿ ಅಂತಾರೆ. ಯಾರ್ ಹೋದ್ರೂ ಏನೂ ಆಗೋದಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ