ಶಾಂತನು ಮುಲಕ್ ಜಾಮೀನು ಅರ್ಜಿ, ಪೊಲೀಸರ ಪ್ರತಿಕ್ರಿಯೆ ಕೋರಿದ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.24 (ಪಿಟಿಐ)- ಟೂಲ್‍ಕಿಟ್ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಶಾಂತನು ಮುಲಕ್ ಅವರ ನಿರೀಕ್ಷಿತ ಜಾಮೀನು ಅರ್ಜಿಯ ಕುರಿತು ನ್ಯಾಯಾಲಯವು ದೆಹಲಿಪೊಲೀಸರ ಪ್ರತಿಕ್ರಿಯೆ ಕೋರಿದೆ. ದೆಹಲಿಯಲ್ಲಿ ಜ.26 ರಂದು ನಡೆದ ರೈತರ ಪ್ರತಿ ಭಟನೆಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣದಲ್ಲಿ ದಿಶಾ ರವಿ ಅವರೊಂದಿಗೆ ಟೂಲ್‍ಕಿಟ್ ಹಂಚಿಕೊಂಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಶಾಂತನು ಮುಲಕ್ ಅವರ ಜಾಮೀನು ಅರ್ಜಿ ಕುರಿತು ಕೋರ್ಟ್ ಪೊಲೀಸರಿಂದ ಪ್ರತಿಕ್ರಿಯೆ ನಿರೀಕ್ಷಿಸಿದೆ.

ಬೆಂಗಳೂರು ಮೂಲದ ದಿಶಾ ರವಿ ಅವರಿಗೆ ಬುಧವಾರ ಜಾಮೀನು ಪ್ರಕಟಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಮುಲಕ್ ಅವರ ಜಾಮೀನು ಅರ್ಜಿ ವಿಚಾರಣೆ ಮತ್ತು ವಾದವನ್ನು ನಾಳೆ (ಶುಕ್ರವಾರ)ಗೆ ಇಟ್ಟುಕೊಂಡಿದ್ದಾರೆ. ಫೆ.16 ರಂದು ಬಾಂಬೆ ಹೈಕೋರ್ಟ್‍ನಿಂದ 10 ದಿನಗಳ ಮಟ್ಟಿಗೆ ಮುಲಕ್ ಸಾರಿಗೆ ಜಾಮೀನು ಪಡೆದಿದ್ದರು.

ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಧೀಶರು ನಡೆಸಿದ ಸಂಕಿಪ್ತ ವಿಚಾರಣೆಯ ಸಂದರ್ಭದಲ್ಲಿ ಫೆ.2 ರವರೆಗೆ ಮುಲಕ್‍ಗೆ ಬಂಧನದಿಂದ ರಕ್ಷಣೆ ನೀಡಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ ಎಂದಿದ್ದಾರೆ. ದೇಶದ್ರೋಹ ಮತ್ತು ಇತರ ಆರೋಪದಡಿ ಮುಲಕ್ ಸೇರಿದಂತೆ ನಿಖಿತಾ ಜಾಕಬ್ ಮತ್ತು ದಿಶಾ ರವಿ ಭಾಗಿಯಾಗಿರುವ ದೂರು ದಾಖಲಾಗಿದೆ.

Facebook Comments